ಕಾರವಾರ: ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರ ಜಿಲ್ಲೆಯ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಭಟ್ಕಳ ತಾಲೂಕಿನ ಮುರುಡೇಶ್ವರದ ಲಾಡ್ಜ್ ವೊಂದರಲ್ಲಿ ಯುವತಿ ಸಮೇತವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಠಕ್ಕೆ ಪಾದ ಪೂಜೆಗೆ ಬರುತ್ತಿದ್ದ 20 ವರ್ಷದ ಸ್ಥಳೀಯ ಯುವತಿ ಜೊತೆ ಫೆ. 27ರಂದು ಸ್ವಾಮೀಜಿ ನಾಪತ್ತೆಯಾಗಿದ್ದರು. ಈ ಸಂಬಂಧ ಯುವತಿ ಪೋಷಕರು ಯುವತಿಯ ಕಣ್ಮರೆ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ
ಪ್ರತಿ ದಿನ ಜಾಗ ಬದಲಿಸುತ್ತಿದ್ದ ಈ ಜೋಡಿಗಾಗಿ ಕೋಲಾರ ಪೊಲೀಸರು ಹಲವು ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು. ಎರಡು ದಿನದಿಂದ ಮುರಡೇಶ್ವರದ ಖಾಸಗಿ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು. ಇದನ್ನೂ ಓದಿ: ಪಾದಪೂಜೆ ವೇಳೆ ಲವ್ – 20ರ ಯುವತಿ ಜೊತೆ 45ರ ಸ್ವಾಮೀಜಿ ಪರಾರಿ?
ಸ್ವಾಮೀಜಿಯ ಮೊಬೈಲ್ ಸಿಗ್ನಲ್ ಆಧರಿಸಿ ಕೋಲಾರ ಪೊಲೀಸರು ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನು ಆಧರಿಸಿ ಇವರನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಮತ್ತು ಯುವತಿಯನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.