ನವದೆಹಲಿ: ಕರ್ನಾಟಕದಲ್ಲಿ ಪಿಯುಸಿ, ಎಸ್‍ಎಸ್‍ಎಲ್‍ಸಿ ಫಲಿತಾಂಶ ಬಂದಾಗ ಬಾಲಕೀಯರು ಮೇಲುಗೈ ಎನ್ನುವ ಸುದ್ದಿಯನ್ನು ನೀವು ಓದಿರಬಹುದು. ಆದರೆ ಈಗ ಬಾಲಕೀಯರು ಶೀಘ್ರದಲ್ಲೇ ದೇಶದ ಶಿಕ್ಷಣದಲ್ಲಿ ಬಾಲಕರನ್ನು ಹಿಂದಿಕ್ಕಲಿದ್ದಾರೆ .
ಹೌದು. ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆಯನ್ನು ಯುವ ಸಮೂಹವೇ ಹೊಂದಿದ್ದು, ಹುಡುಗರನ್ನು ಶಿಕ್ಷಣದಲ್ಲಿ ಹಿಂದಿಕ್ಕಿ ವಿದ್ಯಾರ್ಥಿನಿಯರು ದೊಡ್ಡ ಶಕ್ತಿಯಾಗಿ ದೇಶದ ಪ್ರಗತಿಗೆ ಒಂದು ಭಾಗವಾಗಲು ಸಜ್ಜಾಗಲಿದ್ದಾರೆ ಎಂದು ಶೈಕ್ಷಣಿಕ ವರದಿಯೊಂದು ಹೇಳಿದೆ.
Advertisement
ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣದ ಅರಿವು ಎಲ್ಲೆಡೆ ಮೂಡಿದ್ದು, ಮಹಿಳೆಯರು ಶಿಕ್ಷಣ ಪಡೆಯಲು ಮುಂದೆ ಬರುತ್ತಿದ್ದಾರೆ. 2015-16 ರಲ್ಲಿ 30 ಕೋಟಿ ವಿದ್ಯಾರ್ಥಿಗಳ ಪೈಕಿ ಶೇ.48 ರಷ್ಟು ಹುಡುಗಿಯರು ಎಂದು ಮಾಧ್ಯಮವೊಂದು ಸುದ್ದಿಯನ್ನು ಪ್ರಕಟಿಸಿದೆ.
Advertisement
ಎಷ್ಟಿತ್ತು ಎಷ್ಟು ಏರಿಕೆ ಆಗಿದೆ?
1950-51 ರಲ್ಲಿ ಶಿಕ್ಷಣ ಪಡೆಯಲು ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ದೇಶದಲ್ಲಿ ಶೇ.25 ರಷ್ಟು ಇತ್ತು. 1990-91 ರಲ್ಲಿ ಶೇ.39 ರಷ್ಟು ಇದ್ದರೆ 2000-01 ರಲ್ಲಿ ಈ ಸಂಖ್ಯೆ ಶೇ.42 ಆಗಿತ್ತು.
Advertisement
ಯೂರೋಪ್ ರಾಷ್ಟ್ರಗಳಲ್ಲಿ ಶೇ.54 ರಷ್ಟು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದರೆ, ಅಮೆರಿಕದಲ್ಲಿ ಶೇ. 55 ರಷ್ಟು ಮತ್ತು ಚೀನಾದಲ್ಲಿ ಈ ಸಂಖ್ಯೆ ಶೇ.54 ರಷ್ಟು ಹುಡುಗಿಯರು ಶಿಕ್ಷಣ ಪಡೆದು ರಾಷ್ಟ್ರದ ಅಭಿವೃದ್ಧಿಗೆ ಭಾಗವಾಗಿದ್ದಾರೆ. ಅಲ್ಲದೇ ಉದ್ಯೋಗ, ರಾಜಕೀಯ, ಶೈಕ್ಷಣಿಕ, ಆಡಳಿತ ಹಾಗೂ ಆರ್ಥಿಕ ಕ್ಷೇತ್ರದಲ್ಲೂ ಸಹ ಹುಡುಗಿಯರು ಮುಂದೆ ಇದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ರಾಜಕೀಯ ಕ್ಷೇತ್ರದಲ್ಲಿ ಭಾರತದ ಸಂಸತ್ತಿನಲ್ಲಿ ಒಟ್ಟು ಶೇ.11 ರಷ್ಟು ಮಹಿಳೆಯರಿಗೆ ಸ್ಥಾನ ಸಿಕ್ಕಿದರೆ ಒಟ್ಟು ರಾಜ್ಯಗಳ ಶಾಸನ ಸಭೆಗಳಲ್ಲಿ ಶೇ.8.8 ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. 500 ದೊಡ್ಡ ಖಾಸಗಿ ಕಂಪನಿಗಳಲ್ಲಿ 17 ಜನ ಮಹಿಳೆಯರೇ ಸಿಇಓ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ವಶಿಕ್ಷಣ ಅಭಿಯಾನ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದಾಗಿ ದೇಶದಲ್ಲಿ 1990 ರಿಂದ 2000 ವರೆಗೆ ಮಹಿಳೆಯರ ಶೈಕ್ಷಣಿಕ ಪ್ರಗತಿ ಹೆಚ್ಚಾಗಿದೆ ಎಂದು ಉಲ್ಲೇಖವಾಗಿದೆ. 2000-01 ರ ವೇಳೆಗೆ ಶೇ.35 ರಷ್ಟು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪ್ರವೇಶ ಪಡೆದಿದ್ದರೆ, 2015-16 ರಲ್ಲಿ ಈ ಸಂಖ್ಯೆ ಶೇ.46 ರಕ್ಕೆ ಏರಿಕೆಯಾಗಿತ್ತು.
ಔದ್ಯೋಗಿಕ ಕೋರ್ಸ್‍ಗಳಲ್ಲಿ ಪೈಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಅನುಪಾತ 3:1 ಇದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಈ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿನಿಯರು ಹೆಚ್ಚಾಗಿ ಕಲೆ ಮತ್ತು ಮಾನವಿಕ ಶಿಕ್ಷಣವನ್ನು ಹೆಚ್ಚಾಗಿ ಓದುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಮದುವೆ ವೇಳೆ ಶಿಕ್ಷಣ ವಿಚಾರವೂ ಚರ್ಚೆಗೆ ಬರುತ್ತಿರುವುದಿಂದ ಪೋಷಕರು ಈಗ ಮಗಳನ್ನು ಓದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮುಂದೆ ಉದ್ಯೋಗ ಪಡೆಯುವ ದೃಷ್ಟಿಯಿಂದ ವಿದ್ಯಾರ್ಥಿನಿಯರ ಶಿಕ್ಷಣದ ಪ್ರಮಾಣ ಹೆಚ್ಚಾಗುತ್ತಿದೆ.