ಮುಂಬೈ: ತನ್ನ ಬಾಯ್‌ಫ್ರೆಂಡ್ (Boyfriend) ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನೆಯಲ್ಲಿ ಚಿನ್ನಾಭರಣ (Jewelry) ಕದ್ದಿದ್ದ ಚಾಲಕಿ ಯುವತಿಯನ್ನ ಪೊಲೀಸರು (Police) ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆ ಆದ್ಮೇಲೆ ಸಿನಿಮಾಗೆ ಬ್ರೇಕ್- ಹರಿಪ್ರಿಯಾ ಹೇಳೋದೇನು?
ಕಳ್ಳತನ ಮಾಡಿದ್ದ ಯುವತಿ ತಾನು ತಪ್ಪಿಸಿಕೊಳ್ಳೋದಕ್ಕಾಗಿ ಸ್ನೇಹಿತ ತನ್ನ ಅಶ್ಲೀಲ ಚಿತ್ರ ಕ್ಲಿಕ್ ಮಾಡಿದ್ದಾನೆ. ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಆದ್ದರಿಂದ ಬಲವಂತವಾಗಿ ತನ್ನ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಆತನಿಗೆ ಒಪ್ಪಿಸಿದ್ದೇನೆ ಎಂದು ಹುಡುಗಿ ನಗರದ ಕಪೂರಬಾವಡಿ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ಪೊಲೀಸರು ಅಪ್ರಾಪ್ತ ಬಾಲಕನನ್ನ ವಿಚಾರಣೆಗೆ ಒಳಪಡಿಸಿದ್ದರು. ಸಿಸಿಟಿವಿ (CCTV) ದೃಶ್ಯಾವಳಿ ಪರಿಶೀಲಿಸಿದಾಗ ಆಕೆ ಅಸಲಿ ಆಟ ಬಯಲಾಗಿದೆ.
ಹುಡುಗಿ ತನ್ನ 18 ವರ್ಷದ ಪ್ರಿಯಕರನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅದಕ್ಕಾಗಿ ಕದ್ದ ಆಭರಣಗಳನ್ನ ಮಾನ್ಪಾಡಾ ಪ್ರದೇಶದಲ್ಲಿ 53 ಸಾವಿರ ರೂ.ಗಳಿಗೆ ಮಾರಾಟ ಮಾಡಿಡಿದ್ದಳು. ತನ್ನನ್ನು ಮತ್ತು ಪ್ರಿಯಕರನನ್ನು ಉಳಿಸಿಕೊಳ್ಳಲು ಆಕೆ ಕಥೆ ಕಟ್ಟಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ: ಬಿಹಾರ ಶಿಕ್ಷಣ ಸಚಿವರ ನಾಲಿಗೆ ತಂದವರಿಗೆ 10 ಕೋಟಿ ಬಹುಮಾನ – ಅಯೋಧ್ಯೆ ಸ್ವಾಮೀಜಿ
ಕದ್ದ ಆಭರಣ ಖರೀದಿಸಿದವನನ್ನೂ ಬಂಧಿಸಲಾಗಿದೆ ಎಂದು ಕಪೂರಬಾವಡಿ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಉತ್ತಮ್ ಸೋನವಾನೆ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k