ಕೊಪ್ಪಳ: ಅಸಭ್ಯವಾಗಿ ವರ್ತಿಸಿದ್ದ ಬೀದಿ ಕಾಮಣ್ಣನಿಗೆ ಯುವತಿಯೋರ್ವಳು ಚಪ್ಪಲಿ ಸೇವೆ ಮಾಡಿದ್ದಾಳೆ.
ನಗರದ ಸಾಯಿ ಮಕ್ಕಳ ಆಸ್ಪತ್ರೆ ಬಳಿ ಬಾಲು ಎಂಬಾತ ಯುವತಿಯನ್ನು ಚುಡಾಯಿಸುತ್ತಿದ್ದನು. ಇದ್ರಿಂದ ಬೇಸತ್ತ ಯುವತಿ ಬಾಲುವಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಸಹ ಯುವಕನಿಗೆ ಗೂಸಾ ನೀಡಿದ್ದಾರೆ.
ಸ್ಥಳೀಯರಿಂದ ತಪ್ಪಿಸಿಕೊಳ್ಳಲು ಹೋದ ಯುವಕ ಕಾಲು ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾನೆ. ಆಗಲೂ ಸ್ಥಳೀಯರು ಯುವಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲು ಮೂಲತಃ ಕಾರವಾರದ ನಿವಾಸಿಯಾಗಿದ್ದು, ನಗರದ ಹೋಟೆಲ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ.
ಗಾಯಗೊಂಡ ಬಾಲುನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.