ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಟ್ವೀಟ್ – ವಿಡಿಯೋ ಮೂಲಕ ಯುವತಿಯಿಂದ ಜಗ್ಗೇಶ್‍ಗೆ ತರಾಟೆ

Public TV
3 Min Read
JAGGESH TWEET COLLAGE

ಬೆಂಗಳೂರು: ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಟ್ವೀಟ್ ಹಿನ್ನೆಲ್ಲೆಯಲ್ಲಿ ವಿಡಿಯೋ ಮೂಲಕ ಯುವತಿಯೊಬ್ಬಳು ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಸ್ತುತ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ಅವರು, ಜಗ್ಗೇಶ್ ಗೆದ್ದರೆ ಅದು ಮೋದಿಜೀ ಗೆಲುವು, ಜಗ್ಗೇಶ್ ಗೆದ್ದರೆ ಮೋದಿಯವರ ಪರಿಕಲ್ಪನೆಗೆ ಗೆಲುವು, ಜಗ್ಗೇಶ್ ಗೆದ್ದರೆ ಅದು ಹಿಂದುವಿನ ಗೆಲುವು, ಜಗ್ಗೇಶ್ ಗೆದ್ದರೆ ಪಾಂಡವರ ಗೆಲುವು, ಕೌರವನ ಅಳಿವು ಜೈಹಿಂದ್ ಎಂದು ಬರೆದು ಏಪ್ರಿಲ್ 27 ರಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ವ್ಯಾಪಕ ಪರ, ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ಯುವತಿಯೊಬ್ಬರು ಪ್ರಶ್ನಿಸಿ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಯುವತಿ ಹೇಳಿದ್ದು ಏನು?
ಜಗ್ಗೇಶ್ ನೀವು ರಾಜಕಾರಣಿಯಾಗುವುದಕ್ಕೆ ಮೊದಲು ಚಿತ್ರ ನಟರಾಗಿದ್ದೀರಿ. ನಿಮ್ಮ ಚಿತ್ರಗಳನ್ನು ಬರೀ ಹಿಂದುಗಳು ಮಾತ್ರ ನೋಡಿಲ್ಲ. ಮುಸ್ಲಿಮರು, ಕ್ರೈಸ್ತರು ಎಲ್ಲರೂ ಚಿತ್ರ ನೋಡಿ ನಿಮ್ಮನ್ನು ಬೆಳೆಸಿದ್ದಾರೆ. ಇದೆಲ್ಲಾ ಆದ ಬಳಿಕ ನೀವು ರಾಜಕಾರಣಿ ಆಗಿದ್ದೀರಿ.

ನವರಸನಾಯಕ ಜಗ್ಗೇಶ್ ಈಗಷ್ಟೇ ನಿಮ್ಮ ಟ್ವೀಟ್ ನೋಡಿದೆ. ಜಗ್ಗೇಶ್ ಗೆದ್ದರೆ ಮೋದಿ ಗೆದ್ದಂತೆ. ಜಗ್ಗೇಶ್ ಗೆದ್ದರೆ ಮೋದಿ ಅವರ ಪರಿಕಲ್ಪನೆ ಗೆದ್ದಂತೆ. ನಿಮ್ಮ ನಾಯಕರು ನಿಮ್ಮ ಇಷ್ಟ. ನೀವು ಗೆದ್ದರೆ ಅವರು ಗೆದ್ದಂತೆ, ಅವರು ಗೆದ್ದರೆ ನೀವು ಗೆದ್ದಂತೆ ಇದು ಸರಿ. ಆದರೆ ಜಗ್ಗೇಶ್ ಗೆದ್ದರೆ ಹಿಂದೂ ಗೆದ್ದಂತೆ ಎಂದು ನೀವು ಹೇಳಿದ್ದು ಯಾಕೆ? ನಾನು ಹಿಂದುನೇ, ಆದರೆ ಕರ್ನಾಟಕದಲ್ಲಿ ಹಿಂದುಗಳೇ ಮಾತ್ರ ಇಲ್ಲ. ನೀವು ಈ ಮಟ್ಟಕ್ಕೆ ಬರೋಕೆ ಹಿಂದುಗಳು ಮಾತ್ರ ಕಾರಣವಲ್ಲ. ನಿಮ್ಮ ಸಿನಿಮಾವನ್ನು ಹಿಂದುಗಳು ಮಾತ್ರವಲ್ಲದೇ ಕ್ರೈಸ್ತರು, ಮುಸ್ಲಿಮರು, ಜೈನರು ಜಾತಿ, ಮತ ಎಲ್ಲ ಬಿಟ್ಟು ನಿಮ್ಮ ಚಿತ್ರಗಳನ್ನು ನೋಡಿ ನಿಮ್ಮನ್ನು ಈ ಮಟ್ಟಕ್ಕೆ ತಂದಿದ್ದಾರೆ. ಅದನ್ನು ದಯವಿಟ್ಟು ಮರಿಬೇಡಿ. ಬೇರೆ ರಾಜಕಾರಣಿಗಳಂತೆ ಆಡಬೇಡಿ. ಏಕೆಂದರೆ ನೀವು ಒಂದು ರಾಜಕಾರಣಿ ಆಗುವ ಮೊದಲು ಕಲಾವಿದರು ಎನ್ನುವುದನ್ನು ಮರೆಯಬೇಡಿ.

ಕಲಾವಿದರಿಗೆ ಜಾತಿ ಅಡ್ಡ ಬರಬಾರದು. ಈಗ ನೀವು ಪೂರ್ಣ ಪ್ರಮಾಣದ ರಾಜಕಾರಣಿ ಆಗಿದ್ದೀರಿ. ಆದರೆ ನಿಮ್ಮ ಬಾಯಿಂದ ಧರ್ಮದ ವಿಷಯವಾಗಿ ಈ ರೀತಿಯ ಮಾತುಗಳು ಬರಬಾರದು. ಏಕೆಂದರೆ ನೀವು ಇಂದು ಈ ಮಟ್ಟಕ್ಕೆ ಬರಬೇಕೆಂದರೆ ಹಿಂದುಗಳು ಮಾತ್ರ ಕಾರಣರಲ್ಲ ಎಲ್ಲ ಧರ್ಮದವರು ಕಾರಣರಾಗಿದ್ದಾರೆ. ಎಲ್ಲರನ್ನು ಒಂದೇ ದೃಷ್ಟಿಯಿಂದ, ಮಾನವೀಯತೆ ದೃಷ್ಟಿಯಿಂದ ನೋಡುವುದನ್ನು ಕಲಿಯಿರಿ. ಹಿಂದು ಗೆದ್ದಂತೆ ಯಾಕೆ? ಕರ್ನಾಟಕದಲ್ಲಿ ಹಿಂದುಗಳು ಮಾತ್ರ ಇದ್ದಾರಾ ಗೆಲ್ಲೊದ್ದಕ್ಕೆ. ಮುಸಲ್ಮಾನರು ಬದಕುವುದಕ್ಕೆ ಅವಕಾಶ ಇಲ್ಲವೇ? ಕೈಸ್ತರು ಬದುಕಬೇಡವೇ? ಒಂದು ದೇಶ ಉದ್ದಾರವಾಗಬೇಕೆಂದರೆ ಅಲ್ಲಿರುವ ಜನರು ಉದ್ದಾರವಾಗಬೇಕು ಬರೀ ಒಂದು ಧರ್ಮ ಉದ್ದಾರವಾಗುವುದ್ದಲ್ಲ.

ಈ ದೇಶ ಒಂದು ಒಕ್ಕೂಟ ರಾಷ್ಟ್ರ. ಎಲ್ಲ ಜಾತಿ ಧರ್ಮದವರಿಗೂ ಅವಕಾಶವಿದೆ. ದಯವಿಟ್ಟು ಅದನ್ನು ಅರ್ಥ ಮಾಡಿಕೊಂಡು ಧರ್ಮ ರಾಜಕಾರಣವನ್ನು ಬಿಟ್ಟು ನೀವು ಕಲಾವಿದರಾಗಿ ಎಲ್ಲೋ ಇದ್ದೀರಾ ಅದ್ದನ್ನು ದಯವಿಟ್ಟು ಉಳಿಸಿಕೊಳ್ಳಿ. ನಿಮ್ಮ ಹೆಸರನ್ನು ನೀವು ಹಾಳು ಮಾಡಿಕೊಳ್ಳಬೇಡಿ. ರಾಜಕೀಯ ಬಿಟ್ಟು ಕಲಾವಿದರಾಗಿ ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ. ಹಾಗಾಗಿ ಅದಕ್ಕೆ ತಕ್ಕಂತೆ ನೀವು ನಡೆದುಕೊಳ್ಳಿ. ಏಕೆಂದರೆ ನಿಮ್ಮನ್ನು ಇಷ್ಟಪಡುವವರು ಹಿಂದುಗಳು ಮಾತ್ರವಲ್ಲ. ಎಲ್ಲ ಧರ್ಮದವರು ನಿಮ್ಮನ್ನು ಈಗಲೂ ಇಷ್ಟಪಡುತ್ತಾರೆ. ಅಂತಹ ಪ್ರೀತಿಯನ್ನು ನೀವು ದಯವಿಟ್ಟು ಈ ರೀತಿಯ ಟ್ವೀಟ್ ಗಳನ್ನು ಮಾಡಿ ಅದನ್ನು ಹಾಳು ಮಾಡಿಕೊಳ್ಳಬೇಡಿ ಇದು ನನ್ನ ಮನವಿ.

ಮಿಶ್ರ ಪ್ರತಿಕ್ರಿಯೆ: ಜಗ್ಗೇಶ್ ರವರ ಅರ್ಥಪೂರ್ಣ ಮಾತುಗಳನ್ನು ಅರ್ಥ ಮಾಡಿಕೊಳ್ಳಿ. ಯೋಚಿಸದೆ ಕನ್ನಡಿಗ, ದು ಎಂಬ ಪದಗಳನ್ನು ಅನರ್ಥದಲ್ಲಿ ನೋಡಬೇಡಿ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಇನ್ನೊಬ್ಬರು ನೀವು ಒಬ್ಬ ರಾಜಕಾರಣಿ ಆಗುವ ಮುಂಚೆ ಒಬ್ಬ ಕಲಾವಿದ. ಕಲಾವಿದರಿಗೆ ಜಾತಿ ಧರ್ಮ ಭೇದವಿಲ್ಲ ನಿಮ್ಮನ್ನು ಎತ್ತರಕ್ಕೆ ಬೆಳೆಸುವಲ್ಲಿ ಎಲ್ಲ ಸರ್ವಧರ್ಮದ ಜನರ ಪಾತ್ರವಿದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *