ರಾಂಚಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯನ್ನು ದುಷ್ಕರ್ಮಿಯೋರ್ವ ಸುಟ್ಟು ಹಾಕಿರುವ ಘಟನೆ ಜಾರ್ಖಂಡ್‍ನ (Jharkhand) ದುಮ್ಕಾ (Dumka) ಜಿಲ್ಲೆಯಲ್ಲಿ ನಡೆದಿದೆ.
Advertisement
ಇದೀಗ ಸಂತ್ರಸ್ತ ಯುವತಿಯನ್ನು ರಾಂಚಿಯ (Ranchi) ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ಗೆ (Rajendra Institute of Medical Sciences) ಕಳುಹಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಮತ್ತು ಯುವತಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಜಿಲ್ಲಾಡಳಿತವು ಆಕೆಯ ಕುಟುಂಬಸ್ಥರಿಗೆ ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದೆ. ಇದನ್ನೂ ಓದಿ: ಮೊಬೈಲ್ ಕಳ್ಳನ ಕಾಲಿಗೆ ಪೊಲೀಸರಿಂದ ಫೈರಿಂಗ್ – ದ್ವಿಚಕ್ರ ವಾಹನ, ಮೂರು ಮೊಬೈಲ್ ವಶಕ್ಕೆ
Advertisement
Jharkhand | A girl was set ablaze in Dumka; accused arrested
She has been referred to Ranchi. The boy was known to the girl. The accused is already married and wanted to marry the victim. The parents (of girl) were not ready for the marriage. Probe on: Shivender, DSP, Jarmundi pic.twitter.com/AZKitYr7EA
— ANI (@ANI) October 7, 2022
Advertisement
ಆರೋಪಿ ಮತ್ತು ಯುವತಿ ಇಬ್ಬರೂ ಪರಿಚಿತರಾಗಿದ್ದು, ದುಮ್ಕಾದಲ್ಲಿ ಆಕೆಯ ದೇಹಕ್ಕೆ ಆರೋಪಿ ಬೆಂಕಿ ಹಚ್ಚಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಮತ್ತೆ ಯುವತಿಯನ್ನು ಮದುವೆಯಾಗಲು ಬಯಸಿದ್ದನು. ಆದರೆ ಯುವತಿಯ ಪೋಷಕರು ಮದುವೆಗೆ ನಿರಾಕರಿಸಿದ್ದರಿಂದ ಈ ಕೃತ್ಯ ಎಸಗಿದ್ದಾನೆ ಎಂದು ಜರ್ಮುಂಡಿಯ ಡಿಎಸ್‍ಪಿ ಶಿವೇಂದರ್ ಹೇಳಿದ್ದಾರೆ.
Advertisement
ಈ ಮುನ್ನ ಕೂಡ ಆರೋಪಿ ನೀನು ನನ್ನನ್ನು ಮದುವೆಯಾಗದಿದ್ದರೆ, ನಿನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸುತ್ತೇನೆ ಎಂದು ಯುವತಿಗೆ ಬೆದರಿಕೆಯೊಡ್ಡಿದ್ದನು. ಸದ್ಯ ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾವಗಡ ಸೋಲಾರ್ ಪಾರ್ಕ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ- ಬೊಮ್ಮಾಯಿಗೆ ಡಿಕೆಶಿ ಸವಾಲು