ಚೆನ್ನೈ: ಋತಚಕ್ರದ ವೇಳೆ ಬಾಲಕಿಯನ್ನು ಕುಟುಂಬದವರು ಹೊರಹಾಕಿದ್ದರಿಂದ ಆ ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ತಮಿಳುನಾಡಿನ ಅನಿಕಡು ಗ್ರಾಮದಲ್ಲಿ ನಡೆದಿದೆ.
ವಿಜಯ(12) ಮೃತಪಟ್ಟ ಬಾಲಕಿ. ವಿಜಯ 7ನೇ ತರಗತಿಯಲ್ಲಿ ಓದುತ್ತಿದ್ದಳು. ನ. 12ರಂದು ಬಾಲಕಿಗೆ ಮೊದಲ ಬಾರಿಗೆ ಋತುಚಕ್ರವಾಗಿದೆ. ವಿಜಯಗೆ ಋತುಚಕ್ರದ ವೇಳೆ ಆಕೆಯ ಕುಟುಂಬದವರು ಮನೆಯೊಳಗೆ ಪ್ರವೇಶಿಸಲು ನಿರ್ಬಂಧಿಸಿದ್ದರು.
Advertisement
ವಿಜಯ ಕುಟುಂಬದವರು ಆಕೆಯನ್ನು ಮನೆಯಿಂದ ಹೊರಹಾಕಿ ಹತ್ತಿರದಲ್ಲೇ ಒಂದು ಗುಡಿಸಲು ನಿರ್ಮಿಸಿಕೊಟ್ಟಿದ್ದರು. ವಿಜಯ 16 ದಿನ ಈ ಗುಡಿಸಲಲ್ಲಿ ಒಬ್ಬಳೇ ವಾಸಿಸಬೇಕೆಂದು ಆಕೆಯ ಕುಟುಂಬದವರು ಹೇಳಿದ್ದರು ಎಂದು ವರದಿಯಾಗಿದೆ.
Advertisement
ನ. 16ರಂದು ವಿಜಯ ಗುಡಿಸಲಲ್ಲಿ ಇದ್ದಳು. ಆ ದಿನ ಜೋರು ಗಜ ಚಂಡಮಾರುತದಿಂದಾಗಿ ಗಾಳಿ ಜೋರಾಗಿ ಬೀಸಿತ್ತು. ಹವಾಮಾನ ಇಲಾಖೆ ಮೊದಲೇ ಜನರಿಗೆ ಮನೆಯಿಂದ ಹೊರಬರಬೇಡಿ, ಮನೆಯ ಒಳಗೆ ಸುರಕ್ಷಿತ ಸ್ಥಳದಲ್ಲಿ ಇರಿ ಎಂದು ಎಚ್ಚರಿಕೆ ನೀಡಿತ್ತು. ಈ ಮುನ್ಸೂಚನೆ ಸಿಕ್ಕಿದ್ದರೂ ಮನೆಯವರು ಇದನ್ನು ಲೆಕ್ಕಿಸದೇ ವಿಜಯಗಾಗಿ ಗುಡಿಸಲು ನಿರ್ಮಿಸಿಕೊಟ್ಟಿದ್ದರು.
Advertisement
ಚಂಡಮಾರುತದ ಕಾರಣ ಜೋರಾಗಿ ಗಾಳಿ ಬೀಸಿ ಅಲ್ಲಿದ್ದ ತೆಂಗಿನಮರ ವಿಜಯ ಮಲಗಿದ್ದ ಗುಡಿಸಲಿನ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ವಿಜಯ ಮೃತಪಟ್ಟಿದ್ದಾಳೆ. ಜನರು ಬೆಳಗ್ಗೆ ಎದ್ದು ಬಂದು ನೋಡಿದ್ದಾಗ ವಿಜಯಳ ಮೃತದೇಹ ಪತ್ತೆಯಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv