ತಿರುವನಂತಪುರಂ: ರಂಜಾನ್ ಹಬ್ಬ ಔತಣ ಕೂಟಕ್ಕೆ ಮನೆಯಲ್ಲಿ ಸಾಕಿದ್ದ ಕೋಳಿ ಹುಂಜವನ್ನು ನೀಡುವುದಿಲ್ಲ ಎಂದು ಬಾಲಕಿಯೊಬ್ಬಳು ಪೋಷಕರ ಮನವೊಲಿಸಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಬಾಲಕಿಯ ಮುಗ್ಧತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸದ್ಯ ಬಾಲಕಿಯ ವಿಡಿಯೋವನ್ನು ಸ್ಥಳೀಯ ಶಾಸಕರೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಪೋಸ್ಟ್ ಆದ ಕೆಲ ಕ್ಷಣಗಳಲ್ಲೇ 38 ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.
Advertisement
ಬಾಲಕಿ ವಿಡಿಯೋ ದಲ್ಲಿ ತಾನೇ ನಿತ್ಯ ಆಹಾರ ನೀಡಿ ಸಾಕಿದ ಕೋಳಿಯನ್ನು ಕತ್ತರಿಸುವುದು ಪಾಪದ ಕೆಲಸ ಅಲ್ಲವೇ ಎಂದು ಮನೆ ಮಂದಿಯನ್ನು ಪ್ರಶ್ನಿಸಿ ಮುಗ್ಧತೆ ಪ್ರದರ್ಶಿಸಿದ್ದಾಳೆ. ಈ ವೇಳೆ ಮನೆಯವರು ಕೋಳಿ ಹುಂಜವನನ್ನು ಇಟ್ಟು ಕೊಂಡು ಏನು ಮಾಡುವುದು ಎಂದು ಪ್ರಶ್ನಿಸಿದಕ್ಕೆ ತನಗೆ ಈ ಕುರಿತು ಗೊತ್ತಿಲ್ಲಾ ಬೇರೆ ಯಾರಿಗಾದರು ಕೊಟ್ಟು ಬಿಡಿ. ಅವರು ಏನು ಮಾಡಿದರು ತನಗೆ ತಿಳಿಯುವುದಿಲ್ಲ ಎಂದು ಹೇಳಿದ್ದಾಳೆ.
Advertisement
https://www.facebook.com/drktjaleelonline/videos/912356418947176/
Advertisement
ಈ ವೇಳೆ ಬಾಲಕಿಯ ಮನವೊಲಿಸಲು ಮುಂದಾಗಿದ್ದ ಪೋಷಕರು ಈ ಹಿಂದೆ ಬೆಕ್ಕು ಕೋಳಿಯನ್ನು ತೆಗೆದುಕೊಂದು ಹೋದಾಗ ನಿನಗೆ ಏನಾಗಿತ್ತು ಎಂದು ಕೇಳಿದ್ದು, ಇದಕ್ಕೂ ತನ್ನ ಅಳು ಮೊಗದ ಮೂಲವೇ ಉತ್ತರಿಸಿರುವ ಬಾಲಕಿ ಅದನ್ನು ನಾನು ಸಾಕಿಲ್ಲ. ಆ ಕೋಳಿ ಮನೆ ಬಿಟ್ಟು ಊರು ಸುತ್ತಾಡಲು ಹೋಗುತ್ತಿತ್ತು. ಆದರೆ ಈ ಕೋಳಿ ಪ್ರತಿದಿನ ನಮ್ಮನ್ನು ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಳಿಸುತ್ತದೆ. ಕೋಳಿ ಎಚ್ಚರಗೊಳಿಸದಿದ್ದರೆ ನಾವು ಬೇಗ ಏಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಸಮರ್ಥನೆಯನ್ನು ಮುಂದಿಟ್ಟಿದ್ದಾಳೆ.
Advertisement
ಕೇರಳ ಶಾಸಕರು ಪೋಸ್ಟ್ ಮಾಡಿರುವ ಈ ವಿಡಿಯೋವನ್ನು 1 ಸಾವಿರ ಮಂದಿ ಶೇರ್ ಮಾಡಿದ್ದು, 1 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.