ಕೊಪ್ಪಳ: ಸಾರ್ವಜನಿಕ ಶೌಚಾಲಯದಲ್ಲಿ ಬಾಲಕಿಯೊಬ್ಬಳು ನವಜಾತ ಗಂಡು ಶಿಶುವೊಂದನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದ ಘಟನೆ ಗಂಗಾವತಿಯ ಜಂಗಮರ ಕಲ್ಗುಡಿ ಗ್ರಾಮದಲ್ಲಿ ನಡೆದಿದೆ.
ಬೆಳಿಗ್ಗೆ 6 ಗಂಟೆಗೆ ಗ್ರಾಮದ ಹೊರವಲಯದಲ್ಲಿರೋ ಸಾರ್ವಜನಿಕ ಶೌಚಾಲಯದಲ್ಲಿ ಶೌಚಕ್ಕೆ ಹೋದ ಬಾಲಕಿ ಭೀಮಾ ಹುಲ್ಲಿನಲ್ಲಿ ರಕ್ತ ಬರುವುದನ್ನು ನೋಡಿದ್ದಾಳೆ. ರಕ್ತ ಯಾಕೆ ಬರುತ್ತಿದೆ ಎಂದು ಅಚ್ಚರಿಗೊಂಡು ಹುಲ್ಲನ್ನು ತೆಗೆದು ನೋಡಿದಾಗ ಶಿಶು ಪತ್ತೆಯಾಗಿದೆ.
Advertisement
Advertisement
ಶಿಶುವನ್ನು ವೇಲ್ ನಲ್ಲಿ ಹಾಕಿಕೊಂಡು ಮನೆಗೆ ತಂದು ರಕ್ಷಣೆ ಮಾಡಿದ್ದಾಳೆ. ಬಳಿಕ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತೆಯರಿಗೆ ತಿಳಿಸಿದ್ದಾಳೆ. ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಶಿಶುವನ್ನು ನಾವೇ ಜೋಪಾನ ಮಾಡುತ್ತೀವಿ ಎಂದು ಭೀಮಾ ಬಾಲಕಿ ಹೇಳುತ್ತಿದ್ದಾರೆ. ಇನ್ನು ನವಜಾತ ಶಿಶು ಶೌಚಾಲಯದಲ್ಲಿ ಯಾಕೆ ತಂದು ಹಾಕಿದ್ದಾರೆ ಎನ್ನುವುದನ್ನು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.