ಜೈಪುರ: ಅಜ್ಜ ಸೇರಿ ಮೂವರಿಂದ ಬಾಲಕಿಯ ಮೇಲೆ ತಿಂಗಳು ಗಟ್ಟಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
12 ವರ್ಷದ ಬಾಲಕಿಯ ಮೇಲೆ ಆಕೆಯ ತಾಯಿಯ ತಂದೆ(70), ಅಜ್ಜನ ಸ್ನೇಹಿತ ರಾಮಲಾಲ್ ಬೀಲ್ (50) ಅತ್ಯಾಚಾರವೆಸಗಿದ್ದಾರೆ. 12 ವರ್ಷದ ಹಿಂದೆಯೇ ಬಾಲಕಿಯ ತಂದೆ ಮೃತಪಟ್ಟಿದ್ದರು. ಇದರಿಂದಾಗಿ ಬಾಲಕಿಯು ತನ್ನ ಮಾನಸಿಕ ಅಸ್ವಸ್ಥ ತಾಯಿಯೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ತನ್ನ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಳು.
ಮದ್ಯವ್ಯಸನಿಯಾಗಿದ್ದ ಅಜ್ಜ ತನ್ನ ಮನೆಯಲ್ಲೇ ಈ ಕೃತ್ಯವನ್ನು ಮಾಡಲು ಅವಕಾಶ ನೀಡುತ್ತಿದ್ದರು. ಕೆಲವು ಸಂದರ್ಭದಲ್ಲಿ ರಾಮಲಾಲ್ ಬಾಲಕಿಯ ಅಜ್ಜನಿಗೆ ಇದಕ್ಕಾಗಿ ಹಣವನ್ನು ನೀಡುತ್ತಿದ್ದ. ಇದನ್ನೂ ಓದಿ: ಬೇಲ್ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್ಗೆ ರಮ್ಯಾ ತಿರುಗೇಟು
ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಅಜಯ್ ಬೈರ್ವಾ(20) ಆರು ತಿಂಗಳಲ್ಲಿ ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು.
ಆದರೆ ಬಾಲಕಿಗೆ ಶಾಲೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಳು. ಇದರಿಂದಾಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಒಂದು ತಿಂಗಳ ಗರ್ಭಿಣಿ ಆಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ 70 ವರ್ಷದ ಅಜ್ಜ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಲಾಗಿದೆ. ಇದನ್ನೂ ಓದಿ: ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ