ರಾಂಚಿ: 7 ವರ್ಷದ ಬಾಲಕಿಯ (Girl) ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‌ದಲ್ಲಿ (Jharkhand) ನಡೆದಿದೆ.
ಜಾರ್ಖಂಡ್‌ನ ಪಲಾಮು (Milkman) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಹಾಲು ಸರಬರಾಜು ಮಾಡಲು ಬಾಲಕಿಯ ಮನಗೆ ಬಂದಿದ್ದ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ್ದಾನೆ. ಅದಾದ ಬಳಿಕ ಆತ ಬಾಲಕಿಗೆ ಮೊಬೈಲ್‌ನಲ್ಲಿ ವೀಡಿಯೋವನ್ನು ತೋರಿಸುವುದಾಗಿ ಆಮಿಷವೊಡ್ಡಿದ್ದಾನೆ. ಅಲ್ಲಿಂದ ಆಕೆಯನ್ನು ಪಕ್ಕದಲ್ಲೇ ಇದ್ದ ನಿರ್ಮಾಣ ಹಂತದ ಮನೆಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು
Advertisement
Advertisement
ಘಟನೆಗೆ ಸಂಬಂಧಿಸಿ ಬಾಲಕಿಯ ಪೋಷಕರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು 40 ವರ್ಷದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಬಾಲಕಿಯನ್ನು ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು?