ಚಂಡೀಗಢ: ರಸ್ತೆ ಬದಿಯಲ್ಲಿ ನಾಯಿಗೆ ತಿಂಡಿ ನೀಡುತ್ತಿದ್ದ ಯುವತಿಯ (Woman) ಮೇಲೆ ಕಾರೊಂದು (Car) ಹರಿದ ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.
ತೇಜಸ್ವಿತಾ (25) ಗಂಭೀರ ಗಾಯಗೊಂಡ ಯುವತಿ. ತೇಜಸ್ವಿನಿ ರಸ್ತೆ ಬದಿಯಲ್ಲಿ ಬೀದಿ ನಾಯಿಗೆ (Dog) ಆಹಾರ ನೀಡುತ್ತಿದ್ದಳು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ತೇಜಸ್ವಿತಾ ಮೇಲೆ ಹರಿದಿದೆ. ಈ ವೇಳೆ ರಕ್ತದ ಮಡುವಿನಲ್ಲಿ ಮಲಗಿದ್ದ ತೇಜಸ್ವಿತಾಳನ್ನು ನೋಡಿದ ತಾಯಿ ಪೊಲೀಸರಿಗೆ ಹಾಗೂ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
Advertisement
Advertisement
ಈ ಹಿನ್ನೆಲೆಯಲ್ಲಿ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಹೆಚ್ಚಿನ ಚಿಕಿತ್ಸೆಯ ಪಡೆಯುತ್ತಿದ್ದಾಳೆ. ಘಟನೆ ವೇಳೆ ತೇಜಸ್ವಿತಾ ಆಕೆಯ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರು ಆಕೆಯ ತಲೆ 2 ಬದಿಯಲ್ಲೂ ಹೊಲಿಗೆ ಹಾಕಿದ್ದಾರೆ.
Advertisement
ಕುಟುಂಬಸ್ಥರ ಪ್ರಕಾರ ತೇಜಸ್ವಿತಾ ಆರ್ಕಿಟೆಕ್ಟ್ ಪದವೀಧರರಾಗಿದ್ದು, ಯುಪಿಎಸ್‍ಸಿಗೆ ತಯಾರಿ ನಡೆಸುತ್ತಿದ್ದಾಳೆ. ತೇಜಸ್ವಿತಾ ತಾಯಿಯೊಂದಿಗೆ ಬೀದಿನಾಯಿಗೆ ತಿಂಡಿ ನೀಡಲು ಮಾರುಕಟ್ಟೆಗೆ ಹೋಗಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಗೂ ಅವಕಾಶ ನೀಡಿ: ಸಿಜೆಐಗೆ ಕಿರಣ್ ರಿಜಿಜು ಪತ್ರ
Advertisement
ಇನ್ನೂ ಈ ಭಯಾನಕ ವೀಡಿಯೋ ಸಿಸಿ ಟಿವಿಯಲ್ಲಿ (CC TV) ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿ ತೇಜಸ್ವಿನಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಹಾಗೂ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚನೆ- ಐವರ ಬಂಧನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k