ಬೆಂಗಳೂರು: ಯುವತಿಯೊಬ್ಬಳು ಪೊಲೀಸರ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಅದನ್ನು ರಾಷ್ಟ್ರಪತಿ ಮತ್ತು ಬೆಂಗಳೂರು ಪೊಲೀಸರ ಪೇಜ್‍ಗೆ ಟ್ಯಾಗ್ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕೋರಮಂಗಲ ನಿವಾಸಿ ಕವನ (ಹೆಸರು ಬದಲಾಯಿಸಲಾಗಿದೆ) ಉದ್ದೇಶಪೂರ್ವಕವಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದಾಳೆ. ಈಕೆ ಮಾಡಿರುವ ಎಡವಟ್ಟಿನಿಂದ ಪೊಲೀಸರು ತನ್ನದಲ್ಲದ ತಪ್ಪಿಗೆ ತಲೆತಗ್ಗಿಸಿ ನಿಲ್ಲುವಂತಾಗಿದೆ.
Advertisement
Advertisement
ಏನಿದು ಘಟನೆ?
ಇದೇ ತಿಂಗಳು 6ರಂದು ಕವನ ತನ್ನ ಸ್ನೇಹಿತೆಯ ಜೊತೆ ರಾತ್ರಿ ಕೋರಮಂಗಲದಲ್ಲಿರುವ ಬೋಹೋ ಪಬ್‍ಗೆ ತೆರಳಿದ್ದಾಳೆ. ನಂತರ ಪಾರ್ಟಿ ಮುಗಿಸಿ ವಾಪಸ್ ಆಗಿದ್ದಾಳೆ. ಆದರೆ ಮತ್ತದೇ ಪಬ್ ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಎಂದು ಹೇಳಿದ್ದಾಳೆ. ಆದರೆ ಅಷ್ಟೋತ್ತಿಗೆ ಪಬ್ ಕ್ಲೋಸ್ ಆಗಿತ್ತು. ಸ್ನೇಹಿತೆ ಜೊತೆ ಬಂದಿದ್ದಾಕೆ ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳವಾಗಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್ ಗಳನ್ನು ಒಡೆದು ಹಾಕಿದ್ದಾಳೆ. ಅಲ್ಲದೆ ಶಟರ್ ಮುರಿಯಲು ಯತ್ನಿಸಿದ್ದಾಳೆ. ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Advertisement
ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಕವನಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಕವನ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ನಂತರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ. ಆದರೆ ಯುವತಿ ಮಾತ್ರ ಪೊಲೀಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸಾಲದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನು ಮುರಿದು ಹಾಕಿದ್ದಾರೆ ಎಂದು ಫೇಸ್‍ಬುಕ್‍ನಲ್ಲಿ ರಾಷ್ಟ್ರಪತಿಗೆ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ.
Advertisement
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಪಂತ್ ಯುವತಿಯನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.