ಬೆಂಗಳೂರು: ಕೊರೊನಾ ಮೂರನೇ ಅಲೆ ಭೀತಿ ಈಗ ಜೋರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಜ್ಞರು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಮೆಜೆಸ್ಟಿಕ್‍ನಲ್ಲಿ ಯುವತಿಯೊಬ್ಬಳು ಮಾಸ್ಕ್ ಧರಿಸದೆ ಇದ್ದುದನ್ನು ಕಂಡು ಮಾರ್ಷಲ್‍ಗಳು ದಂಡ ಹಾಕಲು ಮುಂದಾದಾಗ ಮಾರ್ಷಲ್‍ಗಳಿಗೆ ಸರ್ಕಾರಿ ರೂಲ್ಸ್ ತಿಳಿ ಹೇಳಿ ತನ್ನ ಮೊಂಡುವಾದ ಸಮರ್ಥಿಸಿಕೊಂಡಿರುವ ಘಟನೆ ನಡೆದಿದೆ.
Advertisement
ಕೊರೊನಾ ಜೊತೆಗೆ ಓಮಿಕ್ರಾನ್ ರೂಪಾಂತರಿ ವೈರಸ್ ಕಾಟ ಕೂಡ ಈಗ ಎಲ್ಲ ಕಡೆ ಆತಂಕ ಶುರು ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಾಕಷ್ಟು ಕ್ರಮಗಳನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ ಮಾಸ್ಕ್ ಕಡ್ಡಾಯ ಇನ್ನೂ ಸಹ ಮುಂದುವರೆದಿದೆ. ಮಾಸ್ಕ್ ಹಾಕದೇ ಇದ್ದರೆ ದಂಡ ಪ್ರಯೋಗ ಮಾಡಲು ಸರ್ಕಾರ ತಿಳಿಸಿದೆ. ಅದರೇ ಸರಿಯಾದ ರೀತಿಯಲ್ಲಿ ಮಾಸ್ಕ್ ಹಾಕದೇ ಓಡಾಟ ಮಾಡುವವರು ಮಾರ್ಷಲ್ಸ್‌ಗಳ ಜೊತೆ ವಾಗ್ವಾದ ಮಾಡೋದು ಸಹ ಸಾಮಾನ್ಯವಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೈಗೆ ಮಾಸ್ಕ್ ಹಾಕಿಕೊಂಡು ಬಂದ ಯುವತಿ ಮಾರ್ಷಲ್ಸ್‌ಗಳಿಗೇನೆ ಸರ್ಕಾರಿ ರೂಲ್ಸ್ ಏನೂ ಅಂತಾ ತಿಳಿಸಿ ದಂಡ ಕಟ್ಟಲು ಹಿಂದೇಟು ಹಾಕಿದ್ದಾಳೆ. ಇದನ್ನೂ ಓದಿ: ಪತಿ ಮೇಲೆ ಡೌಟ್ ಬಂದು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!
Advertisement
Advertisement
ಇಡೀ ದಿನ ಮಾಸ್ಕ್ ಹಾಕದೇ ಇದ್ದರೆ ಫೈನ್ ಹಾಕಬೇಕು, ನಾನು ATMನಿಂದ ಹೊರ ಬಂದೆ ಅದಕ್ಕೆ ಹಾಕಿಲ್ಲ ಎಂದು ಮೊಂಡುವಾದ ಶುರುಮಾಡಿದ್ದಾಳೆ. ಬಳಿಕ ನಾನು ಫೈನ್ ಕಟ್ಟುತ್ತೇನೆ ಆದರೆ 100 ರೂ. ಮಾಡಿಕೊಳ್ಳಿ ಎಂದು ಚೌಕಾಸಿ ಮಾಡಿದ್ದಾಳೆ. ನಂತರ ನೀವು ಸರಿಯಾದ ರೀತಿಯಲ್ಲಿ ಮಾಸ್ಕ್ ಹಾಕಿಲ್ಲ, ಹಾಗಾಗಿ ದಂಡ ಕಟ್ಟಬೇಕು ಎಂದು ಮಾರ್ಷಲ್ಸ್ ತಿಳಿ ಹೇಳಿ ಕೊನೆಗೆ 250 ರೂ. ದಂಡ ಹಾಕಿ ಮಾಸ್ಕ್ ಧರಿಸಿ ಎಂದು ಜಾಗೃತಿ ಮೂಡಿಸಿ ಕಳುಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಓಮಿಕ್ರಾನ್ ಸೋಂಕು ಪತ್ತೆ- ರಾಜ್ಯದಲ್ಲಿ ಸಂಖ್ಯೆ 3ಕ್ಕೇರಿಕೆ
Advertisement