ಮುಂಬೈ: ಹೆಣ್ಣು ಮಗು ದಾನ ಮಾಡಬಹುದಾದ ಆಸ್ತಿಯಲ್ಲ ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಹೇಳಿದೆ.
ಏನಿದು ಪ್ರಕರಣ?: ಬಾಲಕಿಯೊಬ್ಬಳು ಆಕೆಯ ತಂದೆಯೊಂದಿಗೆ ಜಲ್ನಾ ಜಿಲ್ಲೆಯ ಬದ್ನಾಪುರದ ದೇವಸ್ಥಾನದಲ್ಲಿ ವಾಸಿಸುತ್ತಿದ್ದಳು. ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರ ವಿರುದ್ಧ ಬಾಲಕಿಯು ಆಗಸ್ಟ್ 2021ರಲ್ಲಿ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಸ್ವಘೋಷಿತ ದೇವಮಾನವ ಶಂಕೇಶ್ವರ ಧಾಕ್ನೆ ಮತ್ತು ಅವರ ಶಿಷ್ಯ ಸೋಪಾನ್ ಆರೋಪಿಗಳನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್
Advertisement
Advertisement
ಬಾಲಕಿಯ ತಂದೆ ಸ್ವಯಂಘೋಷಿತ ದೇವಮಾನವನಿಗೆ ತನ್ನ 17 ವರ್ಷದ ಮಗಳನ್ನು ದಾನ ಮಾಡಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಬಾಲಕಿಯನ್ನು ಸ್ವಯಂಘೋಷಿತ ದೇವಮಾನವನಿಗೆ 2018ರಲ್ಲಿ ದಾನವಾಗಿ ನೀಡಿರುವ ದಾನಪತ್ರವನ್ನು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಗಮನಿಸಿದರು. 100 ಛಾಪಾ ಕಾಗದದಲ್ಲಿ ಬಾಲಕಿಯನ್ನು ದಾನವಾಗಿ ನೀಡಿರುವುದಾಗಿ ಉಲ್ಲೇಖಿಸಲಾಗಿತ್ತು. ಹುಡುಗಿಯ ತಂದೆ ತನ್ನ ಮಗಳನ್ನು ದಾನವಾಗಿ ಬಾಬಾಗೆ ನೀಡಿದ್ದಾನೆ ಎಂದು ಹೇಳಲಾಗಿದೆ. ದೇವರ ಸನ್ನಿಧಿಯಲ್ಲಿ ಕನ್ಯಾದಾನವನ್ನು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್
Advertisement
Advertisement
ಹುಡುಗಿ ಅಪ್ರಾಪ್ತಳಾಗಿರುವಾಗ, ತಂದೆ ಅದ್ಹೇಗೆ ದಾನ ಮಾಡಲು ಸಾಧ್ಯ ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು. ದಾನ ಮಾಡಲು ಹೆಣ್ಣು ಒಂದು ಆಸ್ತಿಯಲ್ಲ ಎಂದು ನ್ಯಾಯಮೂರ್ತಿ ಕಂಕಣವಾಡಿ ಹೇಳಿದರು. ನ್ಯಾಯಾಲಯ ಕಣ್ಮುಚ್ಚಿ ಕುಳಿತಿಲ್ಲ. ಅಪ್ರಾಪ್ತ ಬಾಲಕಿಯ ಭವಿಷ್ಯದ ಬಗ್ಗೆ ಚಿಂತಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.