ಮೈಸೂರು: ನಿಶ್ಚಿತಾರ್ಥದ ದಿನವೇ ಯುವತಿ ತನ್ನ ಪ್ರಿಯಕರನ ಬಾಳಸಂಗಾತಿಯಾದ ಪ್ರಕರಣ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನ ಹುಲ್ಲಹಳ್ಳಿ ಹೋಬಳಿಯ ಕುರಿಹುಂಡಿ ಗ್ರಾಮದ ಚೈತ್ರ(21) ಹಾಗೂ ಕೃಷ್ಣಮೂರ್ತಿ(20) ಮದುವೆಯಾದ ಪ್ರೇಮಿಗಳು. ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಹುಡುಗ ಬಡ ಕುಟುಂಬದಿಂದ ಬಂದವನೆಂದು ಹೇಳಿ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.
Advertisement
Advertisement
ಬೇರೆ ಹುಡುಗನೊಂದಿಗೆ ಮಗಳನ್ನು ನಿಶ್ಚಿತಾರ್ಥ ಮಾಡಲು ಯುವತಿ ಪೋಷಕರು ಮುಂದಾಗಿದ್ದರು. ಇದೀಗ ಹೆತ್ತವರ ನಿರ್ಧಾರವನ್ನು ತಿರಸ್ಕರಿಸಿ ಯುವತಿ ಪ್ರಿಯತಮನೊಂದಿಗೆ ನಂಜನಗೂಡಿನ ಪರಶುರಾಮ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
Advertisement
ಹುಡುಗನ ಕುಟುಂಬ ಬಡತನದಲ್ಲಿದ್ದ ಕಾರಣ ಚೈತ್ರ ಮನೆಯವರಿಂದ ಮದುವೆಗೆ ವಿರೋಧವಿತ್ತು. ಹೀಗಾಗಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಂದೇಗಾಲ ಗ್ರಾಮದ ಆನಂದ್ ಎಂಬಾತನೊಂದಿಗೆ ಚೈತ್ರಳ ನಿಶ್ಚಿತಾರ್ಥ ನಿಗದಿಪಡಿಸಿದ್ದರು. ಇದೀಗ ಮನೆಯವರ ನಿರ್ಧಾರವನ್ನು ಧಿಕ್ಕರಿಸಿದ ಚೈತ್ರ, ನಿಶ್ಚಿತಾರ್ಥವನ್ನು ಬದಿಗೊತ್ತಿ ಪ್ರಿಯಕರ ಕೃಷ್ಣಮೂರ್ತಿ ಕೈ ಹಿಡಿದ್ದಾರೆ.
Advertisement