– ವಿವಾಹಕ್ಕೆ 8 ದಿನ ಇರುವಾಗ್ಲೇ ಮಿಸ್ಸಿಂಗ್
ಮಡಿಕೇರಿ: ವಿವಾಹ ನಿಶ್ಚಯವಾಗಿದ್ದ ಯುವತಿಯೊಬ್ಬಳು ವಾಟ್ಸಪ್‍ನಲ್ಲಿ ಫೋಟೋ ಕಳುಹಿಸಿ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.
ಶಾಂತಳ್ಳಿ ಹೋಬಳಿಯ ಜಕ್ಕನಳ್ಳಿ ಗ್ರಾಮದ ನಿವಾಸಿ ಜೆ.ಜಿ. ರಮೇಶ್ ಎಂಬವರ ಮಗಳು ಜೆ.ಆರ್. ರಂಜಿತಾ ಕಾಣೆಯಾಗಿರುವ ವಿದ್ಯಾರ್ಥಿನಿ. ಪಟ್ಟಣ ಸಮೀಪದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು.
Advertisement
Advertisement
ರಂಜಿತಾಗೆ ಇದೇ ಮಾರ್ಚ್ 8 ರಂದು ಕೊಡ್ಲಿಪೇಟೆಯ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ಮಧ್ಯೆ ರಂಜಿತಾ ಕಾಣೆಯಾಗಿದ್ದು, ಬೇರೊಬ್ಬ ಯುವಕನೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಮದುವೆ ನಿಶ್ಚಯವಾಗಿದ್ದ ಯುವಕನಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾಳೆ. ಅಲ್ಲದೇ ನಾನು ಈತನನ್ನೇ ಲವ್ ಮಾಡುತ್ತಿರುವುದು ಎಂದು ಮೆಸೇಜ್ ಮಾಡಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Advertisement
Advertisement
ಕಳೆದ ಫೆಬ್ರವರಿ 24 ರಂದು ಕಾಲೇಜಿಗೆಂದು ತೆರಳಿದವಳು ನಂತರ ಮನೆಗೆ ಬಂದಿಲ್ಲ. ಹೀಗಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಯುವತಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.