ವಿಜಯಪುರ: ಫೇಸ್ಬುಕ್ನಲ್ಲಿ ಪ್ರಿಯಕರ ಸೆಲ್ಫಿ ಫೋಟೋ ಅಪ್ಲೋಡ್ ಮಾಡಿದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ ನಡೆದಿದೆ.
ಸುಧಾರಾಣಿ ಬಿರಾದಾರ(23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುಧಾರಾಣಿ ಪಿಯುಸಿ ಓದುತ್ತಿದ್ದಾಗ ಕೆರೂಟಗಿ ಗ್ರಾಮದ ಶಿವಾನಂದ ಎಂಬವನನ್ನು ಪರಿಚಯ ಮಾಡಿಕೊಂಡಿದ್ದಳು. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರು ಆಗಾಗ ಪಾರ್ಕಿನಲ್ಲಿ ಸುತ್ತಾಡುತ್ತಿದ್ದರು.
Advertisement
Advertisement
ಈ ಹಿಂದೆ ಸುಧಾರಾಣಿ ವಿಜಯಪುರಕ್ಕೆ ಕೋಚಿಂಗ್ಗೆ ಎಂದು ಹೋಗಿದ್ದಾಗ ಶಿವಾನಂದ ಆಕೆಯನ್ನು ಭೇಟಿ ಮಾಡಲು ಬಂದಿದ್ದನು. ಈ ಸಂದರ್ಭದಲ್ಲಿ ಸುಧಾರಾಣಿ ಹಾಗೂ ಶಿವಾನಂದ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಬಳಿಕ ಆ ಸೆಲ್ಫಿ ಫೋಟೋವನ್ನು ಶಿವಾನಂದ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದನು.
Advertisement
Advertisement
ಶಿವಾನಂದ ಫೋಟೋ ಅಪ್ಲೋಡ್ ಮಾಡಿದ್ದರಿಂದ ಮಾನಸಿಕವಾಗಿ ನೊಂದ ಸುಧಾರಾಣಿ ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಸುಧಾರಾಣಿಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ.
ಈ ಬಗ್ಗೆ ಸುಧಾರಾಣಿ ಪೋಷಕರು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.