ಮೆಟ್ರೋ ಸ್ಟೇಷನ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಯತ್ನ – CISF ಯೋಧರಿಂದ ರಕ್ಷಣೆ

Public TV
1 Min Read
Metro Station

ನವದೆಹಲಿ: ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ 25 ವರ್ಷದ ಯುವತಿಯೊಬ್ಬಳು ಸೈಡ್‍ವಾಲ್‍ನ ಅಂಚಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ರಂಪಾಟ ಮಾಡಿದ್ದಾಳೆ.

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ಸಿಬ್ಬಂದಿ ಯುವತಿಯನ್ನು ಗಮನಿಸಿದ ತಕ್ಷಣವೇ ಶಿಫ್ಟ್ ಇನ್ ಚಾರ್ಜ್‍ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಮುಖ್ಯಸ್ಥರು ಯುವತಿಯನ್ನು ಕೆಳಗೆ ಬರುವಂತೆ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಯುವತಿ ತಾನು ಅಂಚಿನ ಮೇಲಿನಿಂದ ಇಳಿಯುವುದಿಲ್ಲ ಎಂದು ಜಗಳವಾಡಿದ್ದಾಳೆ. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ

ನಂತರ ಶಿಫ್ಟ್ ಇನ್ ಚಾರ್ಜ್ ಸ್ಟೇಷನ್ ಕಂಟ್ರೋಲರ್, ಮೆಟ್ರೋ ಕಂಟ್ರೋಲ್, ಕ್ಲಸ್ಟರ್ ಇನ್ಸ್‌ಪೆಕ್ಟರ್ ಮತ್ತು ಲೈನ್ ಇನ್ ಚಾರ್ಜ್ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?

ಕೊನೆಗೆ ಸಮೀಪದಲ್ಲಿದ್ದ ಮಾಲ್‍ವೊಂದರ ನಾಲ್ವರು ಸಿಬ್ಬಂದಿಯೊಂದಿಗೆ ಶಿಫ್ಟ್ ಇನ್ ಚಾರ್ಜ್ ಕೆಳಗೆ ಹೋಗಿ ದಪ್ಪವಾದ ಕಂಬಳಿ ವ್ಯವಸ್ಥೆಗೊಳಿಸಿ ಯುವತಿಯನ್ನು ರಕ್ಷಿಸಲು ಮುಂದಾದರು. ಹೀಗೆ ಸಕಲ ಪ್ರಯತ್ನಗಳ ನಂತರವೂ ಯುವತಿ ಅಂಚಿನಿಂದ ಕೆಳಗೆ ಬಿದ್ದಿದ್ದಾಳೆ. ಆದರೆ ಆಕೆಯನ್ನು ರಕ್ಷಿಸಿ, ತಕ್ಷಣವೇ ಸಮೀಪದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಇದೀಗ ಯುವತಿಗೆ ಪ್ರಜ್ಞೆ ಬಂದಿದ್ದು, ಆಕೆಯ ಬಲಗಾಲಿಗೆ ಕೆಲವು ಗಾಯಗಳಾಗಿದೆ.

Share This Article
Leave a Comment

Leave a Reply

Your email address will not be published. Required fields are marked *