ಹುಡುಗಿ ‘ಐ ಲವ್ ಯೂ’ ಅಂದರೆ ನಿಮ್ ಜೀವನ ನಾಶ : ನಟ ಸಲ್ಮಾನ್ ಖಾನ್

Public TV
1 Min Read
salman

ಪ್ರೀತಿ ಗೀತಿ ಇತ್ಯಾದಿ ವಿಚಾರವಾಗಿ ಸಲ್ಮಾನ್ ಖಾನ್ (Salman Khan) ಇತ್ತೀಚೆಗೆ ತುಂಬಾ ಮಾತನಾಡುತ್ತಿದ್ದಾರೆ. ಅದರಲ್ಲೂ ಗರ್ಲ್ ಫ್ರೆಂಡ್ ಕುರಿತಾಗಿ ಮೊಟ್ಟ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಒಂದು ಸಲ ತಾವೂ ಪ್ರೇಮದ ಹೊಂಡದಲ್ಲಿ ಬಿದ್ದಿರುವ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ.

salman khan 3 1

ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ (Aishwarya Rai) ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಬಿಟೌನ್ (Bollywood)ಗೆ ಹೊಸದೇನೂ ಅಲ್ಲ. ಸಲ್ಮಾನ್ ಈವರೆಗೂ ಮದುವೆ ಆಗದೇ ಇರುವುದಕ್ಕೆ ಇದೊಂದು ಕಾರಣ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಗೆ ಕೈ ಕೊಟ್ಟು ಅಮಿತಾಭ್ ಸೊಸೆಯಾದರು ಎಂದು ಈಗಲೂ ಬಾಲಿವುಡ್ ಮಾತನಾಡಿಕೊಳ್ಳುತ್ತದೆ. ಈ ವಿಚಾರವನ್ನು ಪರೋಕ್ಷವಾಗಿ ಸಲ್ಮಾನ್ ಕೂಡ ಹೇಳಿಕೊಂಡಿದ್ದಾರೆ.

salman khan and lawrence bishnoi 1

ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿರುವ ಸಲ್ಮಾನ್, ತಮಗೆ ಕೈ ಕೊಟ್ಟ ಸಂಗತಿಯನ್ನು ಬೇರೆ ರೂಪದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಹುಡುಗಿ ಒಂದ್ ಸಲ ಐ ಲವ್ ಯೂ (I Love You) ಅಂದರೆ, ನಿಮ್ಮ ಜೀವನ ಮುಗೀತು ಅಂತ ಅರ್ಥ ಎಂದು ಹೇಳಿದ್ದಾರೆ. ಈ ಮಾತು ಸಖತ್ ವೈರಲ್ ಕೂಡ ಆಗಿದೆ. ಇದೊಂದು ವಿವಾದಾತ್ಮಕ ಮಾತು ಎಂದು ಚರ್ಚೆ ಮಾಡಲಾಗುತ್ತಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

salman khan 1

ಹುಡುಗಿಯರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ. ನಿಮಗೆ ಹುಡುಗಿ ಸಿಕ್ಕಿಲ್ಲ ಅಂತ ಎಲ್ಲರನ್ನೂ ಹಾಗೆ ಕರೆಯಬೇಡಿ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಸಲ್ಮಾನ್ ಪರ ಮತ್ತು ವಿರೋಧದ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾವನ್ನು ತುಂಬಿ ತುಳುಕಿಸುತ್ತಿವೆ.

Share This Article