– ರಾಜ್ಯಮಟ್ಟದ ಖೋ ಖೋ ಆಟಗಾರ್ತಿ ಆಗಿದ್ದ 19ರ ಯುವತಿ
ಲಕ್ನೋ: ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಇಶಿತಾ ಮಿಶ್ರಾ(19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಎರಡನೇ ವರ್ಷದ ಬಿಎಸ್‍ಸಿ ಓದುತ್ತಿರುವ ಇಶಿತಾ ಭಾನುವಾರ ತನ್ನ ಹಾಸ್ಟೆಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಶಿತಾ ರಾಜ್ಯಮಟ್ಟದ ಖೋ ಖೋ ಆಟಗಾರ್ತಿಯಾಗಿದ್ದು, ತನ್ನ ತಂಡದ ಕ್ಯಾಪ್ಟನ್ ಕೂಡ ಆಗಿದ್ದಳು.
Advertisement
Advertisement
ಇಶಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್‍ನೋಟ್ ಪತ್ತೆ ಆಗಿದೆ. ಡೆತ್‍ನೋಟ್‍ನಲ್ಲಿ ಅಮ್ಮ, ಅಪ್ಪ ಹಾಗೂ ಅಣ್ಣ ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಸಾರಿ ಸಾರಿ ಸಾರಿ ನಿಮ್ಮ ಮಗಳು ಇಶಿತಾ ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾಳೆ. ಅಲ್ಲದೆ ಡೆತ್‍ನೋಟ್ ಕೊನೆಯಲ್ಲಿ ಇಶಿತಾ ತನ್ನ ಸಹಿ ಕೂಡ ಹಾಕಿದ್ದಾಳೆ.
Advertisement
Advertisement
ಈ ಬಗ್ಗೆ ಇಶಿತಾ ತಂದೆ ಪ್ರತಿಕ್ರಿಯಿಸಿ, ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ನಾನು ನನ್ನ ಮಗಳ ಜೊತೆ ಮಾತನಾಡಿದ್ದೆ. ಖೋ ಖೋ ಆಡುವ ಸಂದರ್ಭದಲ್ಲಿ ಮೂವರು ಆಕೆಯ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಳು. ಇದರಿಂದ ಇಶಿತಾ ತುಂಬಾನೇ ಬೇಜಾರಿನಲ್ಲಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಇಶಿತಾಗೆ ಹೇಳಿದ್ದೆ. ಆದರೆ ಅಷ್ಟರಲ್ಲೇ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದರು.
ಭಾನುವಾರ 11 ಗಂಟೆಗೆ ಇಶಿತಾ ಊಟ ಮಾಡಿದ್ದಳು. ಅದಾದ ಬಳಿಕ ಆಕೆ ಮೊಬೈಲಿನಲ್ಲಿ ಮಾತನಾಡುತ್ತಾ ತನ್ನ ರೂಮಿಗೆ ಹೋಗಿ ಒಳಗಿನಿಂದ ಬಾಗಿಲು ಲಾಕ್ ಮಾಡಿಕೊಂಡಳು ಎಂದು ಹಾಸ್ಟೆಲಿನಲ್ಲಿರುವ ಇಶಿತಾ ಸ್ನೇಹಿತರು ಹೇಳಿದ್ದಾರೆ. ಇದೇ ವೇಳೆ ಡಿಜಿ ಕಾಲೇಜು ಪ್ರಿನ್ಸಿಪಲ್ ಡಾ. ಸಾಧನಾ ಸಿಂಗ್ ಮಾತನಾಡಿ, ಇಶಿತಾ ತುಂಬಾ ಚೆನ್ನಾಗಿ ಓದುತ್ತಿದ್ದಳು. ಪ್ರಥಮ ವರ್ಷ ಬಿಎಸ್‍ಸಿಯಲ್ಲಿ ಆಕೆ ಎರಡನೇ ಟಾಪರ್ ಆಗಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ನಮಗೆ ಎಂದಿಗೂ ಎಣಿಸಿರಲಿಲ್ಲ ಎಂದು ತಿಳಿಸಿದರು.
ಇಶಿತಾ ಡೆತ್‍ನೋಟ್‍ನಲ್ಲಿ ತನ್ನ ಕುಟುಂಬಸ್ಥರಿಗೆ ಕ್ಷಮೆ ಕೇಳಿದ್ದು ಹಾಗೂ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾಳೆ. ಇದನ್ನು ಹೊರತುಪಡಿಸಿ ಆಕೆ ಏನು ಬರೆದಿಲ್ಲ. ಸದ್ಯ ಪೊಲೀಸರು ಇಶಿತಾ ಕೊನೆಯದಾಗಿ ಯಾರ ಜೊತೆ ಯಾವಾಗ ಮಾತನಾಡಿದ್ದಳು ಎಂಬುದನ್ನು ತಿಳಿಯಲು ಕಾಲ್ ಡಿಟೇಲ್ಸ್ ಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಇಶಿತಾ ವಾಟ್ಸಪ್ ಚಾಟ್ ಕೂಡ ಪೊಲೀಸರು ಪರಿಶೀಲಿಸುತ್ತಿದ್ದಾರೆ.