– ಸ್ನೇಹಿತೆಯ ಅಣ್ಣನಿಂದ ಪೊಲೀಸರಿಗೆ ಮಾಹಿತಿ
ಹೈದರಾಬಾದ್: ಬ್ಯೂಟಿಷಿಯನ್ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲಕ್ಪೇಟೆಯಲ್ಲಿ ನಡೆದಿದೆ.
ಪಿ.ಹಿಮಾಬಿಂದು (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸೂರಪೇಟೆ ಜಿಲ್ಲೆಯ ಮಲ್ಲರೆಡ್ಡಿ ಗುಡೆಮ್ ಗ್ರಾಮದ ಡೇವಿಡ್ ರಾಜ್ ಎಲೆಕ್ಟ್ರಿಷಿಯನ್ ಮಗಳಾಗಿದ್ದು, ಮೂರು ವರ್ಷಗಳ ಹಿಂದೆ ಬ್ಯೂಟಿಷಿಯನ್ ಕೋರ್ಸ್ ನಲ್ಲಿ ತರಬೇತಿ ಪಡೆಯಲು ಹೈದರಾಬಾದ್ಗೆ ಬಂದಿದ್ದಳು.
Advertisement
ಮೃತ ಹಿಮಾಬಿಂದು ವೆಂಕಟಾದ್ರಿನಗರದ ಧಮತ್ರಿ ನಿವಾಸದಲ್ಲಿ ತನ್ನ ಸ್ನೇಹಿತೆ ಸ್ವಾತಿಯೊಂದಿಗೆ ವಾಸವಾಗಿದ್ದಳು. ಅಲ್ಲದೇ ಸ್ವಾತಿಯೊಂದಿಗೆ ಬ್ಯೂಟಿಷಿಯನ್ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು ಎಂದು ಇನ್ಸ್ಪೆಕ್ಟರ್ ಕೆ.ವಿ.ಸುಬ್ಬರಾವ್ ತಿಳಿಸಿದ್ದಾರೆ.
Advertisement
Advertisement
ಹಿಮಾಬಿಂದು ಇದ್ದಕ್ಕಿದ್ದಂತೆ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೇ ಮನೆಯಲ್ಲಿ ವಾಸಿಸುತ್ತಿದ್ದ ಸ್ವಾತಿಯ ಸಹೋದರ ಕಿಶೋರ್ ರಾತ್ರಿ 10.30ಕ್ಕೆ ಹಿಮಾಬಿಂದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಈ ಬಗ್ಗೆ ಮಾಹಿತಿ ತಿಳಿಸಿದ್ದಾನೆ. ನಂತರ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಅಷ್ಟರಲ್ಲಿಯೇ ಬಿಂದು ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರೀತಿಯ ವಿಚಾರಕ್ಕೆ ಹಿಮಾಬಿಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.