ಲಕ್ನೋ: 17 ವರ್ಷದ ಬಾಲಕಿಯೊಬ್ಬಳ ಹೊಟ್ಟೆಯಿಂದ 2ಕೆಜಿ ಕೂದಲನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದು ಶಾಕ್ ಆಗಿರುವ ಘಟನೆ ಲಕ್ನೋದ ಬಲರಾಂಪುರ್ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದೆರಡು ವರ್ಷದಿಂದ ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಳು. ಕೊನೆಗೆ ವಾಂತಿ ಹಾಗೂ ಹೊಟ್ಟೆ ನೋವಿನ ಸಮಸ್ಯೆಯಿಂದ ಒದ್ದಾಡಲು ಶುರು ಮಾಡಿದಾಗ ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Advertisement
Advertisement
ಈ ವೇಳೆ ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದ ನಂತರ ಬಾಲಕಿ ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಂಡಿದೆ. ನಂತರ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗಲೂ ಮತ್ತೆ ಬಾಲಕಿ ಹೊಟ್ಟೆಯಲ್ಲಿ ಗಡ್ಡೆ ಪತ್ತೆಯಾಗಿದೆ. ಕೊನೆಗೆ ಎಂಡೊಸ್ಕೋಪ್ ಮಾಡಿದ ನಂತರ ಆಕೆಯ ಹೊಟ್ಟೆಯಲ್ಲಿ ಕೂದಲಿನ ಉಂಡೆ ಪತ್ತೆಯಾಗಿದ್ದು, ಅದು ಎರಡು ಕೆಜಿ ತೂಕ ಇರುವ ಹಾಗೂ 20 ಸೆಂ.ಮೀ. ಅಗಲದ ಗಡ್ಡೆ ಇರುವುದನ್ನು ಕಂಡು ವೈದ್ಯರು ಕೂಡ ಆಶ್ಚರ್ಯಗೊಂಡಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ನಡುವೆಯೂ ನಂಜುಂಡೇಶ್ವರನಿಗೆ ಬಂತು ಕೋಟಿ ಕಾಣಿಕೆ!
Advertisement
Advertisement
ಒಟ್ಟಾರೆ ಕೂಲಂಕುಷವಾಗಿ ತಪಾಸಣೆ ನಡೆಸಿದ ನಂತರ ವೈದ್ಯರು ಹುಟ್ಟಿನಿಂದಲೇ ಬಾಲಕಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಕೊನೆಗೆ ಒಂದೂವರೆ ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ ಬಳಿಕ ಬಾಲಕಿ ಹೊಟ್ಟೆಯಿಂದ ಕೂದಲನ್ನು ಹೊರತೆಗೆದಿದ್ದು, ಇದೀಗ ಹೊಟ್ಟೆ ನೋವಿನ ಯಾವುದೇ ಸಮಸ್ಯೆಗಳಿಲ್ಲದೇ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ. ನಂತರ ವೈದ್ಯರು ಕೂದಲು ಹೊಟ್ಟೆಯಲ್ಲಿರುವ ಸಣ್ಣ ಕರುಳನ್ನು ಸಂಪೂರ್ಣವಾಗಿ ಮುಚ್ಚಿದ್ದರಿಂದ ಆಹಾರ ಹಾದುಹೋಗಲು ಸಾಧ್ಯವಾಗಲಿಲ್ಲ. ಅಲ್ಲದೇ ಇದರಿಂದ ಬಾಲಕಿ 32ಕೆಜಿ ತೂಕವನ್ನು ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕೊನೆಗೆ ಬಾಲಕಿ ಅಪರೂಪದ ಟ್ರೈಕೋಬೆಜೋವರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿದುಬಂದಿದ್ದು, ಈ ರೋಗಿಗಳು ತಮ್ಮ ಕೂದಲನ್ನು ಕಿತ್ತು ಸೇವಿಸುತ್ತಾರೆ ಎಂದು ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!