ದಾವಣಗೆರೆ: ಪ್ರಿಯಕರನೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಕಾಮುಕರನ್ನು ಬಂಧಿಸುವಲ್ಲಿ ಚನ್ನಗಿರಿ ಠಾಣಾ ಪೊಲೀಸರು ಯಶ್ವಸಿಯಾಗಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳು ಗುಡ್ಡದಲ್ಲಿ ಕಳೆದ ಶುಕ್ರವಾರದಂದು ಈ ಘಟನೆ ನಡೆದಿತ್ತು. ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ಪ್ರಿಯಕರ ರಮೇಶ್ ತನ್ನ ಸ್ನೇಹಿತರಾದ ಅರುಣ್ ಹಾಗೂ ವಿಜಯ್ ಜೊತೆಗೂಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಿಯಕರನ್ನು ಬಂಧಿಸಿದ್ದರು. ಆದರೆ ಅರುಣ್ ಮತ್ತು ವಿಜಯ್ ಪರಾರಿಯಾಗಿದ್ದರು.
Advertisement
Advertisement
ಏನಿದು ಪ್ರಕರಣ?: ರಂಗಾಪುರ ಗ್ರಾಮದ ರಮೇಶ್ ಮತ್ತು ಅಪ್ರಾಪ್ತೆಯ ಪ್ರೀತಿ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಆಗಿತ್ತು. ರಮೇಶ್ ಪುನಃ ಪ್ರೀತಿಸುತ್ತೇನೆಂದು ಹೇಳಿ ಬಾಲಕಿಯನ್ನ ಜೂ.2 ರಂದು ಜೋಳದಾಳು ಅಮ್ಮನ ಗುಡ್ಡಕ್ಕೆ ಕರೆತಂದಿದ್ದ. ರಮೇಶ್ ಜೊತೆ ವಿಜಯ್, ಅರುಣ್ ಕೂಡ ಬಂದಿದ್ದು, ಮೂವರು ಸೇರಿ ಬಾಲಕಿಯನ್ನ ಹೆದರಿಸಿ ಅತ್ಯಾಚಾರ ಮಾಡಿದ್ದರು.
Advertisement
ಮೂವರು ಕಾಮುಕರಿಂದ ತಪ್ಪಿಸಿಕೊಂಡು ಹೋದ ಬಾಲಕಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಳು. ಶಿವಮೊಗ್ಗ ಆಸ್ಪತ್ರೆಯವರು ಈ ಬಗ್ಗೆ ಅಲ್ಲಿನ ಎಸ್‍ಪಿಗೆ ಮಾಹಿತಿ ನೀಡಿದ್ದರು. ನಂತರ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ಮೂವರು ಕಾಮುಕರನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
Advertisement