ಬಾಗಲಕೋಟೆ: ಕ್ವಾರಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಿ ತಾನೆ ಸಾವನ್ನಪ್ಪಿದ ಬಾಲಕಿಯೊಬ್ಬಳಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಲಭಿಸಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ವಡ್ಡರಹೊಸೂರು ಗ್ರಾಮದ ನೇತ್ರಾವತಿ ಚೌಹಾಣ್ ಎಂಬ ಯುವತಿ ಈ ಪ್ರಶಸ್ತಿಗೆ ಆಯ್ಕೆಯಾದ ಬಾಲಕಿ. 2017ರ ಮೇ 13ರಂದು ಕಲ್ಲಿನ ಕ್ವಾರಿಯ ನೀರಲ್ಲಿ ಆಕೆಯ ಮಾವನ ಮಕ್ಕಳಾದ 14 ವರ್ಷದ ಮಾಂತೇಶ್ ಮತ್ತು 13 ವರ್ಷದ ಗಣೇಶ್ ಆಟವಾಡುವ ವೇಳೆ ಅಕಸ್ಮತಾಗಿ ಕಲ್ಲಿನ ಕ್ವಾರಿಯ ನೀರಲ್ಲಿ ಬಿದ್ದು ಮುಳುಗುತ್ತಿದ್ದರು.
Advertisement
Advertisement
ಈ ವೇಳೆ ಬಟ್ಟೆ ತೊಳೆಯುತ್ತಿದ್ದ ನೇತ್ರಾ ಚೌಹಾಣ್ ಕ್ವಾರಿಗೆ ಹಾರಿ ಮಾಂತೇಶನನ್ನು ಬದುಕಿಸಿದ್ದಳು. ಇನ್ನೊಬ್ಬ ಬಾಲಕ ಗಣೇಶನನ್ನು ಬದುಕಿಸುವ ಪ್ರಯತ್ನದಲ್ಲಿ ನೇತ್ರಾ ತಾನು ಮುಳುಗಿ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ನೇತ್ರಾ ಮತ್ತು ಗಣೇಶನನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ವಡ್ಡರ ಹೊಸೂರು ಗ್ರಾಮಸ್ಥರಲ್ಲಿ ದುಃಖದ ವಾತಾವರಣ ಮಡುಗಟ್ಟಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.
Advertisement
ಈಗ ಬಾಲಕಿ ನೇತ್ರಾಳ ಸಾಹಸ ಕಂಡು, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಮರಣೋತ್ತರವಾಗಿ ಆಕೆಗೆ ಪ್ರಧಾನಿ ಮೋದಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
Advertisement