ಲಕ್ನೋ: ತಂದೆಯೇ ಮಗಳಿಗೆ ಗುಂಡು ಹಾರಿಸಿ ಕೊಂದು ರಸ್ತೆಯಲ್ಲಿ ಬಿಸಾಡಿರುವ ಘಟನೆ ಮಥುರಾ ಜಿಲ್ಲೆಯಲ್ಲಿ ನಡೆದಿದೆ. ಕೆಲವು ದಿನಗಳ ಬಳಿಕ ಇದೀಗ ಯುವತಿಯ ಶವ ಟ್ರಾಲಿ ಬ್ಯಾಗ್‍ನಲ್ಲಿ (Trolley Bag) ಯಮುನಾ (Mathura) ಎಕ್ಸ್‌ಪ್ರೆಸ್‍ವೇ (Yamuna Expressway) ಸರ್ವಿಸ್ ರಸ್ತೆಯಲ್ಲಿ ಪತ್ತೆಯಾಗಿದೆ.
ಮೃತ ಯುವತಿಯನ್ನು ದೆಹಲಿಯ ಬದರ್‍ಪುರ ನಿವಾಸಿಯಾಗಿರುವ ಆಯುಷಿ ಯಾದವ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಆಯುಷಿ ತನ್ನ ತಂದೆ ನಿತೇಶ್ ಯಾದವ್‍ಗೆ ಹೇಳದೆ ಎಲ್ಲೋ ಹೋಗಿದ್ದಳು. ನಂತರ ಮನೆಗೆ ಹಿಂದಿರುಗಿದಾಗ ಆಕೆಯೊಂದಿಗೆ ಜಗಳವಾಡಿ ಕೋಪದಿಂದ ಮಗಳ ಮೇಲೆ ತಂದೆಯೇ ಗುಂಡು ಹಾರಿಸಿದ್ದಾನೆ. ಬಳಿಕ ಯುವತಿಯ ಶವವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ, ಟ್ರಾಲಿ ಬ್ಯಾಗ್‍ನಲ್ಲಿ ತುಂಬಿ ಕೊಂಡು ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‍ವೇನಲ್ಲಿ ಬ್ಯಾಗ್ ಅನ್ನು ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾದ್ಮೇಲೂ ಅಕ್ರಮ ಸಂಬಂಧ – ಮಾಜಿ ಪ್ರೇಯಸಿಯನ್ನ ಕತ್ತರಿಸಿ, ಅರೆಬೆತ್ತಲಾಗಿ ಬಿಸಾಡಿ ವಿಕೃತಿ
ಶುಕ್ರವಾರ ಯುವತಿಯ ಶವ ಪತ್ತೆಯಾಗಿದ್ದು, ಮೊದಲಿಗೆ ಆಕೆಯನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಘಟನೆಯ ಬಗ್ಗೆ ಹತ್ತಿರದ ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ಕಳುಹಿಸಲಾಯಿತು. ನಂತರ ಯುವತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಸದ್ಯ ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಆಫೀಸರ್ ಅಲೋಕ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಶಾರೀಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಆಗಮಿಸಿದ ಹೆತ್ತವರು