ವಿದ್ಯಾರ್ಥಿನಿಗೆ ಬಲವಂತವಾಗಿ ಕಿಸ್ ಕೊಡಿಸಿ ರ‍್ಯಾಗಿಂಗ್ – ಐವರು ವಶಕ್ಕೆ

Public TV
2 Min Read
ragging

ಭುವನೇಶ್ವರ: ಹೊಸದಾಗಿ ಕಾಲೇಜಿಗೆ ಬಂದ ಹುಡುಗಿಗೆ ಹುಡುಗನೊಬ್ಬನಿಂದ ಬಲವಂತವಾಗಿ ಕಿಸ್ ಕೊಡಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿರುವ ಘಟನೆ ಒಡಿಶಾದಲ್ಲಿ (Odisha) ಕಾಲೇಜೊಂದರಲ್ಲಿ ನಡೆದಿದೆ.

ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಘಟನೆಯಲ್ಲಿ ಭಾಗಿಯಾಗಿದ್ದ 12 ವಿದ್ಯಾರ್ಥಿಗಳನ್ನು ಗಂಜಾಂ ಜಿಲ್ಲೆಯ (Ganjam district) ಕಾಲೇಜು ಡಿಬಾರ್ ಮಾಡಿದೆ. ಇದನ್ನೂ ಓದಿ: ಜೀವಂತ ಕುರಿ ನುಂಗಿದ ಹೆಬ್ಬಾವು ಸೆರೆ – ಹೆಗಲ ಮೇಲೆ ಹೊತ್ತೊಯ್ದ ಗ್ರಾಮಸ್ಥರು

Ragging 01 800x445 1

ಕಳೆದ ತಿಂಗಳಷ್ಟೇ ಸರ್ಕಾರಿ ಕಾಲೇಜಿನ ಪ್ರಥಮ ದರ್ಜೆಗೆ ಸೇರಿದ್ದ ವಿದ್ಯಾರ್ಥಿನಿಗೆ ಮತ್ತೋರ್ವ ವಿದ್ಯಾರ್ಥಿಯಿಂದ ಬಲವಂತವಾಗಿ ಹಿರಿಯ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಕಿಸ್ ಕೊಡಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಘಟನೆ ವೇಳೆ ಹುಡುಗಿ ಎದ್ದು ಹೋಗಲು ಪ್ರಯತ್ನಿಸಿದಾಗ ಆಕೆಯ ಹಿಡಿದು ಹಿರಿಯ ವಿದ್ಯಾರ್ಥಿ ತಡೆಯುತ್ತಾನೆ. ಜೊತೆಗೆ ಕೈಯಲ್ಲಿ ದೊಣ್ಣೆ ಹಿಡಿದು ಕುಳಿತಿದ್ದ ಹಿರಿಯ ವಿದ್ಯಾರ್ಥಿಯೊಂದಿಗೆ ಹುಡುಗ ಜಗಳವಾಡಲು ಮುಂದಾದಾಗ ಆರೋಪಿ ಕಪಾಳಮೋಕ್ಷ ಮಾಡಿದ್ದಾನೆ.

ಆತಂಕಕಾರಿ ಸಂಗತಿ ಎಂದರೆ ಈ ಘಟನೆಯನ್ನು ಪ್ರತಿಭಟಿಸುವುದನ್ನು ಬಿಟ್ಟು ಸ್ಥಳದಲ್ಲಿಯೇ ಇದ್ದ ಇತರ ಹುಡುಗಿಯರು ಸುಮ್ಮನೆ ನಗುತ್ತಾ ನೋಡುತ್ತಿರುತ್ತಾರೆ. ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಶಿಸ್ತು ಸಮಿತಿ ಮತ್ತು ಜಂಟಿ ರ‍್ಯಾಗಿಂಗ್ ಸೆಲ್ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲು ನಿರ್ಧರಿಸಿದೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.

ragging 1 2

ಆರೋಪಿಗಳು ಎರಡನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಅವರಿಗೆ ತಮ್ಮ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡುವುದಿಲ್ಲ. ಅಲ್ಲದೇ ಘಟನೆಯ ಸಂಬಂಧ ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಬೆಂಗ್ಳೂರಲ್ಲೂ ಮಾಡ್ತೇವೆ, ಅವರ ವಿಚಾರಗಳನ್ನು ಪಠ್ಯದಲ್ಲಿ ತರುತ್ತೇವೆ: ಬೊಮ್ಮಾಯಿ

ಬಂಧಿತ ಐವರು ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಮತ್ತು ಐಟಿ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ಬಂಧಿತ ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಅದರಲ್ಲಿಯೂ ಈ ಘಟನೆಯ ಪ್ರಮುಖ ಆರೋಪಿ 24 ವರ್ಷದ ಅಭಿಷೇಕ್ ನಹಕ್ ಆಗಿದ್ದು, ಈತ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ.

ಇದು ಕೇವಲ ರ‍್ಯಾಗಿಂಗ್ ಪ್ರಕರಣವಲ್ಲ, ಇದರಿಂದಾಗಿ ಬಾಲಕಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಘಟನೆಗಳ ಬಗ್ಗೆ ರಾಜ್ಯದ ರ‍್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಬಹಾರ್ಂಪುರದ ಪೊಲೀಸ್ ಅಧೀಕ್ಷಕ ಸರಬನ್ ವಿವೇಕ್. ಎಂ ಒತ್ತಿ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *