ಬೆಂಗಳೂರು: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ್ದು, ಈಗ ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.
ನಗರದ ರಾಮಮೂರ್ತಿನಗರದ ಕಲ್ಕರೆಯ ನಿವಾಸಿ ವಂಚನೆಗೆ ಒಳಗಾದ ಯುವತಿ. ಯುವಕ ಸಂಜಯ್ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಯುವತಿ ಆರೋಪಿಸುತ್ತಿದ್ದಾಳೆ. ಇವರಿಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿ ಸಂಜಯ್ ಪೋಷಕರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
Advertisement
ಇದಾದ ಬಳಿಕ ಯುವತಿಗೆ ತಿಳಿಸದಂತೆ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ಸಂಜಯ್ ಹೋಗಿದ್ದ. ಬಳಿಕ ಸಂಜಯ್ ನೀನು ಇಲ್ಲಿಗೆ ಬಾ, ನಾವಿಬ್ಬರು ಇಲ್ಲೆ ಮದುವೆಯಾಗೋಣ ಎಂದು ಮೇಲ್ ಮಾಡಿ ತಿಳಿಸಿದ್ದನು. ಅದರಂತೆಯೇ ಯುವತಿ ಸಂಜಯ್ ಮದುವೆಯಾಗುತ್ತಾನೆಂದು ನಂಬಿ ಲಂಡನ್ ಗೆ ಹೋಗಿದ್ದಾಳೆ. ನಂತರ ಯುವತಿ ಮತ್ತು ಸಂಜಯ್ ಜೊತೆಯಲ್ಲಿದ್ದುಕೊಂಡೆ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಇಬ್ಬರು ಒಂದೇ ರೂಮ್ ನಲ್ಲಿ ಲೀವಿಂಗ್ ಟುಗೆದರ್ ರಿಲೇಷನ್ ಷಿಪ್ ನಲ್ಲಿದ್ದರು ಎಂದು ತಿಳಿದು ಬಂದಿದೆ.
Advertisement
Advertisement
ಇತ್ತ ಸಂಜಯ್ ಪೋಷಕರಿಗೆ ಇವರಿಬ್ಬರು ಲಂಡನ್ ನಲ್ಲಿರುವುದು ತಿಳಿದಿದೆ. ನಂತರ ಸಂಜಯ್ ತಾಯಿ ಎದೆ ನೋವು ಎಂದು ಮಗನನ್ನ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಸಂಜಯ್ ಬೆಂಗಳೂರಿಗೆ ಬರುತ್ತಿದ್ದಂತೆ ಆತನ ಪೋಷಕರು ಯುವತಿಯ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಸಂಜಯ್ ಪೋಷಕರು ಜೀವ ಬೆದರಿಕೆ ಹಾಕಿದ್ದ ಮಾಹಿತಿಯನ್ನು ಯುವತಿಗೆ ಆಕೆ ತಂದೆ-ತಾಯಿ ತಿಳಿಸಿದ್ದಾರೆ. ಕೂಡಲೇ ಯುವತಿ ಲಂಡನ್ ನಿಂದ ಬೆಂಗಳೂರಿಗೆ ಬಂದಿದ್ದಾಳೆ.
Advertisement
ಯುವತಿ ಬೆಂಗಳೂರಿಗೆ ಬಂದು ವಿಚಾರ ಹೇಳಿದಾಗ ಸಂಜಯ್ ಮದುವೆಯಾಗಲು ನಿರಾಕರಿಸಿದ್ದಾನೆ. ಬಳಿಕ ನಾನು ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಹೇಳಿದೆ. ಆದರೆ ನಾನು ದೂರು ನೀಡಲು ಠಾಣೆಗೆ ಹೋಗುತ್ತಿದ್ದಂತೆ ಸಂಜಯ್ ಲಂಡನ್ ಗೆ ಪರಾರಿಯಾಗಿದ್ದಾನೆ. ಸಂಜಯ್ ಲಂಡನ್ ಗೆ ತೆರಳಿದ್ದರಿಂದ ರಾಮಮೂರ್ತಿನಗರ ಪೊಲೀಸರು ವಂಚನೆ ಪ್ರಕರಣವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ನಮ್ಮ ಪೋಷಕರಿಗೆ ಸಂಜಯ್ ಪೋಷಕರ ಒಡ್ಡಿದ್ದ ಜೀವ ಬೆದರಿಕೆ ಪ್ರಕರಣವನ್ನು ಮಾತ್ರ ಸ್ವೀಕಾರ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಈಗ ಯುವತಿ ಮಹಿಳಾ ಆಯೋಗಕ್ಕೆ ಸಂಜಯ್ ವಿರುದ್ಧ ದೂರು ನೀಡಿದ್ದಾರೆ. ಮತ್ತೆ ಎಕ್ಸಾಂ ಬರೆಯಲು ಯುವತಿ ಲಂಡನ್ ಗೆ ಹೋಗಿದ್ದ ವೇಳೆ ಸಂಜಯ್ ರೂಮ್ ಗೆ ಬಂದು ಮೊಬೈಲ್ ಒಡೆದು ಹಲ್ಲೆ ಮಾಡಿದ್ದಾನೆ. ಈ ಕುರಿತು ಲಂಡನ್ ಪೊಲೀಸ್ ಠಾಣೆಯಲ್ಲಿ ಸಂಜಯ್ ವಿರುದ್ಧ ದೂರು ನೀಡಿದ್ದೆ. ಬಳಿಕ ಲಂಡನ್ ಪೊಲೀಸರು ದೂರು ದಾಖಲಿಸಿಕೊಂಡು ಸಂಜಯ್ ನನ್ನು ವಶಕ್ಕೆ ಪಡೆದುಕೊಂಡಿದ್ದರು ಎಂದು ಯುವತಿ ತಿಳಿಸಿದ್ದಾಳೆ.
ಸದ್ಯ ಲಂಡನ್ ನಿಂದ ಬೆಂಗಳೂರಿಗೆ ಬಂದಿರುವ ಯುವತಿ, ತನಗೆ ನ್ಯಾಯ ಬೇಕೆಂದು ಆಗ್ರಹಿಸುತ್ತಿದ್ದಾರೆ.