ವಾಷಿಂಗ್ಟನ್: ಮಗುವಿನ ಮೂಗಿನಲ್ಲಿ ಸಿಕ್ಕಿಕೊಂಡ ಗೊಂಬೆಯ ಶೂ ತೆಗೆಯಲು ವೈದ್ಯರೊಬ್ಬರು 3,000 ಡಾಲರ್(2.13 ಲಕ್ಷ ರೂ.) ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಲಾಸ್ ವೆಗಾಸ್‍ನಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಮೂಗಿನಲ್ಲಿ ಸಿಕ್ಕಿಹಾಕಿಕೊಂಡ ಶೂ ತೆಗೆಸಲು ಲೂಸಿ ಬ್ರಾನ್ಸನ್‍ಳ ತಾಯಿ ಕ್ಯಾಟಿ ಹೆಂಡರ್ಸನ್‍ನಲ್ಲಿರುವ ಸೇಂಟ್ ರೋಸ್ ಡೊಮಿನಿಕೇನ್ ಸೈನಾ ಕ್ಯಾಂಪಸ್‍ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದಾರೆ.
Advertisement
Advertisement
3 ವರ್ಷದ ಮಗು ಲೂಸಿ ಬ್ರಾನ್ಸನ್‍ಳ ಮೂಗಿನ ಎರಡೂ ಹೊಳ್ಳೆಯಲ್ಲಿ ಗೊಂಬೆಯ ಕಾಲಿನ ಶೂಗಳು ಸಿಕ್ಕಿ ಹಾಕಿಕೊಂಡಿತ್ತು. ಒಂದು ಶೂವನ್ನು ತೆಗೆಯಲು ತಾಯಿ ಕ್ಯಾಟಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೊಂದು ಶೂವನ್ನು ತೆಗೆಯುವಲ್ಲಿ ವಿಫಲರಾಗಿದ್ದಾರೆ. ನಂತರ ಮಗುವನ್ನು ಡಿಗ್ನಿಟಿ ಹೆಲ್ತ್ ಸೆಂಟರ್‍ಗೆ ಕರೆದೊಯ್ದಿದ್ದಾರೆ. ವೈದ್ಯರು ಶೂ ತೆಗೆದಿದ್ದು ಇಷ್ಟಕ್ಕೇ 2.13 ಲಕ್ಷ ರೂ. ಬಿಲ್ ಮಾಡಿದ್ದಾರೆ. ತನ್ನ ಇಮೇಲ್‍ನಲ್ಲಿ ಇಷ್ಟು ಮೊತ್ತದ ಬಿಲ್ ನೋಡಿದ ಮಗುವಿನ ತಾಯಿ ಕ್ಯಾಟಿ ಶಾಕ್ ಆಗಿದ್ದಾರೆ.
Advertisement
ಬಿಲ್ ನೋಡಿದ ನಂತರ ನನಗೆ ಇದು ತಪ್ಪು ಎನ್ನುವುದು ತಿಳಿಯಿತು. ಬಹುಶಃ ಇವರು ಇನ್ಶೂರೆನ್ಸ್ ದರವನ್ನು ಸರಿಯಾಗಿ ಪರಿಗಣಿಸಿಲ್ಲದಿರಬಹುದು, ಇಲ್ಲವೇ ತಪ್ಪಾಗಿ ಬಿಲ್ ನೀಡಿರಬಹುದು ಎಂದು ಭಾವಿಸಿದೆ. ನಂತರ ತಪ್ಪಾಗಿ ಬಿಲ್ ನೀಡಲಾಗಿಲ್ಲ ಎನ್ನುವುದು ತಿಳಿಯಿತು ಎಂದು ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.
Advertisement
ನಂತರ ಅವರು ಹೈ ಡಿಟೆಕ್ಟೆಬಲ್ ಮೆಡಿಕಲ್ ಪಾಲಿಸಿ ಪ್ರಕಾರ ಬಿಲ್ ಕಡಿಮೆ ಮಾಡಿಸಿ 1.21 ಲಕ್ಷ ರೂ. ಕಟ್ಟಿ ಬಂದಿದ್ದಾರೆ.
ಜುಲೈನಲ್ಲಿ ನಟ ರಾಹುಲ್ ಭೋಸ್ ಚಂಢೀಗಡದ ಖಾಸಗಿ ಹೋಟೆಲ್‍ನಲ್ಲಿ ಬಾಳೆಹಣ್ಣು ಖರೀದಿಸಿದಾಗ ಅವರಿಗೆ 442.50 ರೂ. ಬಿಲ್ ನೀಡಲಾಗಿತ್ತು. ಈ ವಿಡಿಯೋವನ್ನು ಭೋಸ್ ಅವರು ಸಾಮಾಜಿಕ ಜಾಲvತಾಣಗಳಲ್ಲಿ ಹಾಕಿದ್ದರು. ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು.