ಮಂಗಳೂರು: ಲೂಡೋ (Ludo) ಬೋರ್ಡ್‍ನ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವನ್ನಪ್ಪಿದ್ದ ಘಟನೆ ಉಳ್ಳಾಲದ (Ullal) ಕೊಲ್ಯ ಗ್ರಾಮದಲ್ಲಿ ನಡೆದಿದೆ.
ಕೇರಳದ (Kerala) ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ, ರಾಜೇಶ್ವರಿ ದಂಪತಿಯ ಪುತ್ರಿ ತನುಷ್ಕ (8) ಮೃತ ಬಾಲಕಿ. ಸಹೋದರ, ಸಹೋದರಿ ಜೊತೆ ಲೂಡೋ ಆಟ ಆಡುತ್ತಿದ್ದಾಗ ಶಂಕು ಆಕಾರದ ಲೂಡೋ ಕಾಯಿನ್‍ನ್ನು ಬಾಲಕಿ ನುಂಗಿದ್ದಳು. ಇದರಿಂದ ಏಕಾಏಕಿ ಉಸಿರುಗಟ್ಟಿ, ಬಾಳಕಿ ಗಂಭೀರ ಸ್ಥಿತಿ ತಲುಪಿದ್ದಳು. ಇದನ್ನೂ ಓದಿ: ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ
ಬಾಲಕಿಯನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಾಯ

