Connect with us

Crime

ಲೈವ್ ಸುಸೈಡ್: ಕಟ್ಟಡದ 7ನೇ ಮಹಡಿಯಿಂದ ಜಿಗಿದು ಕಾಲೇಜು ಯುವತಿ ಆತ್ಮಹತ್ಯೆ

Published

on

ಲೀಮಾ: ಕಾಲೇಜು ಯುವತಿಯೊಬ್ಬಳು ಕಟ್ಟದ 7ನೇ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆವೊಂದು ಪೆರು ದೇಶದ ಟ್ರುಜಿಲ್ಲೊ ನಗರದಲ್ಲಿ ನಡೆದಿದೆ.

ಎಸ್ಪಿನೋಜಾ ರುಯಿಜ್ ಎಂಬ ಯುವತಿ ತನ್ನ ಗೆಳಯನನ್ನು ಭೇಟಿ ಮಾಡಲು ಶೈಕ್ಷಣಿಕ ಕೇಂದ್ರ ಹೋಗಿದ್ದಳು. ಆದರೆ ಗೆಳಯನನ್ನು ಭೇಟಿ ಮಾಡಿ ವಾಪಸ್ ಬಂದಿದ್ದಾಳೆ. ನಂತರ ಬಲವಾದ ನಿರ್ಧಾರ ತೆಗೆದುಕೊಂಡಿದ್ದು, ಪೆರು ದೇಶದ ಆಂಟೆಬರ್ ಓರೆಗೋ ಖಾಸಗಿ ವಿಶ್ವವಿದ್ಯಾಲಯದ ಮೆಡಿಕಲ್ ವಾರ್ಡ್ ನ ಕಟ್ಟಡದಿಂದ ಯುವತಿ ನೋಡನೋಡುತ್ತಿದ್ದಂತೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಯುವತಿಯನ್ನು ವೈದ್ಯಕೀಯ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಆಕೆಯ ಗೆಳೆಯ ಸ್ವಲ್ಪ ಸಮಯದ ನಂತರ ಯುನಿವರ್ಸಿದಾದ್ ಪ್ರಿವಾದ ದೆಲ್ ನೋರ್ಟೆಯಲ್ಲಿರುವ ಇಂಡಸ್ಟ್ರೀಯಲ್ ಇಂಜಿನಿಯರಿಂಗ್ ಕಾಲೇಜಿನ ಮೂಲಕ ಹೋಗಿದ್ದಾನೆ.

ಆತ್ಮಹತ್ಯೆಯ ದೃಶ್ಯವನ್ನು ಅಲ್ಲಿಯೇ ಓಡಾಡುತ್ತಿದ್ದ ಜನರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದು ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಯುವತಿಯ ಆತ್ಯಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: ಕಂಪೆನಿಯ ಕಟ್ಟಡದ 10ನೇ ಮಹಡಿಯಿಂದ ಬಿದ್ದು ಮಹಿಳಾ ಟೆಕ್ಕಿ ಆತ್ಮಹತ್ಯೆ

ಇದನ್ನು ಓದಿ: ಸಾಯುವ 1 ವಾರ ಮುನ್ನ ಟೆಕ್ಕಿ ಗೀತಾಂಜಲಿ ಗೂಗಲ್ ನಲ್ಲಿ ಇದನ್ನು ಸರ್ಚ್ ಮಾಡಿದ್ರು

https://www.youtube.com/watch?v=-spK9t5giTU

 

 

Click to comment

Leave a Reply

Your email address will not be published. Required fields are marked *