ಕಲಬುರಗಿ: ಕಲುಷಿತ ನೀರು ಕುಡಿದು ಮಗು ಸಾವಾಗಿದ್ದು, ಹಲವರು ಅಸ್ವಸ್ಥಗೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ (Sedam) ತಾಲ್ಲೂಕಿನ ಹೂಡಾ (ಬಿ) ಗ್ರಾಮದಲ್ಲಿ ನಡೆದಿದೆ.
ಮಮತಾ ಹಣಮಂತ ಜೋಗುರ (5) ಮೃತ ಬಾಲಕಿ. ಹೂಡಾ (ಬಿ) ಗ್ರಾಮಕ್ಕೆ ಪೂರೈಕೆಯಾದ ನೀರು ಕುಡಿದು ಅಸ್ವಸ್ಥರಾಗಿ ಅನೇಕರು ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀಬಾಯಿ, ಐವರು ಮಕ್ಕಳು ಸೇರಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹತ್ತಾರು ವರ್ಷದಿಂದ ಬೆಳೆದು ನಿಂತಿದ್ದ ಮರ ನಾಶ- ಎಪಿಎಂಸಿ ಸಿಬ್ಬಂದಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ