ಡೆಹ್ರಾಡೂನ್: ಮನೆಯ ಹೊರಗೆ ಆಟವಾಡುವಾಗ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆ ಸೇವಿಸಿದ ಓರ್ವ ಬಾಲಕಿ ಮೃತಪಟ್ಟು, ಬಾಲಕಿಯ ಸಹೋದರನ ಸ್ಥಿತಿ ಗಂಭೀರವಾಗಿರುವ ಘಟನೆ ಡೆಹ್ರಾಡೂನಿನಲ್ಲಿ ನಡೆದಿದೆ.
ಶಗುನ್(4) ಮೃತ ಬಾಲಕಿಯಾಗಿದ್ದು, ಪಿಯೂಷ್ ಆಸ್ಪತ್ರೆಯಲ್ಲಿ ಗಂಭೀರವಾಗಿದ್ದಾನೆ. ಫೆ. 21ರಂದು ಈ ಘಟನೆ ನಡೆದಿದ್ದು, ಬಾಲಕಿಯ ಕುಟುಂಬದವರು 25ರಂದು ನಡೆಯುವ ಮದುವೆ ಸಮಾರಂಭಕ್ಕಾಗಿ ಜವಳಿ ಖರೀದಿಸಲು ಹೋಗಿದ್ದರು.
Advertisement
ತಂದೆ ಉಮೇಶ್ ತನ್ನ ಮಕ್ಕಳು ಶಗುನ್ ಹಾಗೂ ಪಿಯೂಷ್‍ನನ್ನು ತನ್ನ ಅಜ್ಜ ಶೋರ್ ರಾಮ್ ಬಳಿ ಬಿಟ್ಟು ಹೋಗಿದ್ದರು. ಅಜ್ಜ ತನ್ನ ಕೆಲಸದಲ್ಲಿ ನಿರತರಾಗಿದ್ದಾಗ ಶಗುನ್ ಹಾಗೂ ಪಿಯೂಷ್ ಪಕ್ಕದ ಮನೆಯವರ ಮಕ್ಕಳ ಜೊತೆ ಆಟವಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆಯನ್ನು ಮೂವರು ಹಂಚಿಕೊಂಡು ತಿಂದಿದ್ದಾರೆ.
Advertisement
Advertisement
ಮಾತ್ರೆ ಸೇವಿಸಿ ಕೆಲವೇ ಹೊತ್ತಿನಲ್ಲಿ ಶಗುನ್, ಪಿಯೂಷ್ ಹಾಗೂ ಇನ್ನೊರ್ವ ಬಾಲಕನ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಮೂವರು ಮಕ್ಕಳು ವಾಂತಿ ಮಾಡಿ ತಲೆ ತಿರುಗುತ್ತಿದೆ ಎಂದು ಹೇಳುತ್ತಿದ್ದರು. ಪಕ್ಕದ ಮನೆಯ ಮಹಿಳೆ ತನ್ನ ಮಗನ ಬಾಯಿಗೆ ಕೈ ಹಾಕಿ ವಾಂತಿ ಮಾಡಿಸಿದ್ದಾಳೆ. ಇದರಿಂದ ಆ ಬಾಲಕನ ಆರೋಗ್ಯದ ಸ್ಥಿತಿ ಸುಧಾರಿಸಿದೆ.
Advertisement
ಶಗುನ್ ಹಾಗೂ ಪಿಯೂಷ್ ತಂದೆ ಉಮೇಶ್ ತನ್ನ ಇಬ್ಬರು ಮಕ್ಕಳನ್ನು ಕಾಶಿಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಗೂನ್ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಪಿಯೂಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾರ್ಚ್ 19ರಂದು ಶಗೂನ್‍ನ 5ನೇ ವರ್ಷದ ಹುಟ್ಟುಹಬ್ಬವಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv