ಮಡಿಕೇರಿ: ಹಳೆ ಲವ್ವರ್ ಕಾಟಕ್ಕೆ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.
ದಿವ್ಯಜ್ಯೋತಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ದಿವ್ಯಜ್ಯೋತಿ ಮಡಿಕೇರಿ ಡೈರಿ ಫಾರ್ಮ್ ನಿವಾಸಿಯಾಗಿದ್ದು, ಪೋಷಕರಿಗೆ ತಿಳಿಸದೆ ಬ್ರಿಜೇಶ್ ಎಂಬಾತನ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು.
ದಿವ್ಯಜ್ಯೋತಿ, ಬ್ರಿಜೇಶ್ ಜೊತೆ ಮದುವೆ ಆಗುವ ಮೊದಲು ಪವನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪೋಷಕರು ಪ್ರೀತಿಗೆ ನಿರಾಕರಿಸಿದ್ದಕ್ಕೆ ದಿವ್ಯಜ್ಯೋತಿ, ಪವನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ಬ್ರೇಕಪ್ ಮಾಡಿಕೊಂಡ ನಂತರ ಪೋಷಕರಿಗೆ ತಿಳಿಸದೇ ಬ್ರಿಜೇಶ್ ಜೊತೆ ರಿಜಿಸ್ಟರ್ ಮಾರೇಜ್ ಆಗಿದ್ದಳು.
ಮಾಜಿ ಪ್ರೇಯಸಿಯ ಮದುವೆ ವಿಷಯ ತಿಳಿದ ಪವನ್ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಪವನ್, ಆತನ ಜೊತೆ ನಿನ್ನ ಮದುವೆ ಆಗಲು ನಾನು ಬಿಡುವುದಿಲ್ಲ. ನೀನು ಮದುವೆಯಾದ ಮೇಲೆ ಆತನ ಜೊತೆ ಹೇಗೆ ಬದುಕುತ್ತೀಯಾ ಎಂದು ನಾನು ನೋಡುತ್ತೇನೆ ಎಂದು ದಿವ್ಯಜ್ಯೋತಿಗೆ ಕಿರುಕುಳ ನೀಡಿದ್ದಾನೆ.
ಮಾಜಿ ಪ್ರಿಯಕರನ ಕಾಟಕ್ಕೆ ಬೇಸತ್ತ ದಿವ್ಯಜ್ಯೋತಿ, ‘ಪವನ್‍ನಿಂದ ಟಾರ್ಚರ್ ಇದೆ’ ಎಂದು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಾರ್ಚರ್ ಕೊಟ್ಟ ಪವನ್ ಹಾಗೂ ರಿಜಿಸ್ಟರ್ ಮದುವೆ ಆಗಿದ್ದ ಬ್ರಿಜೇಶ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.