ಹಾಸನ: ಸ್ನೇಹಿತನೊಂದಿಗೆ ಲಾಡ್ಜ್‌ಗೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣವೊಂದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚಿರಂತಿ(23) ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ. ಚಿರಂತಿ ಬೈಕ್ ಶೋ ರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಗೆಳೆಯ ಆಟೋ ಡ್ರೈವರ್ ಆದ ರಾಕೇಶ್ ಜೊತೆ ಬುಧವಾರ ರಾತ್ರಿ ಸುಮಾರು 10.26ಕ್ಕೆ ನಗರದ ಮಾರುಕಟ್ಟೆಯ ಬಳಿ ಇರುವ ಖಾಸಗಿ ಲಾಡ್ಜ್‌ಗೆ ಆಗಮಿಸಿದ್ದಾರೆ.
ರೂಮಿನಲ್ಲಿದ್ದ ಚಿರಂತಿ ಬೆಳಗ್ಗೆ ಬಾತ್ ರೂಂಗೆ ಹೋಗಿ ಗಂಟೆಯಾದರೂ ಹೊರ ಬಂದಿರಲಿಲ್ಲ. ಆಗ ರಾಕೇಶ್‍ಗೆ ಅನುಮಾನ ಮೂಡಿತು. ಬಳಿಕ ರಾಕೇಶ್ ಲಾಡ್ಜ್ ನವರ ಸಹಾಯದಿಂದ ಬಾತ್‍ರೂಂ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆ ತಿಳಿಯುತ್ತಿದ್ದಂತೆ ಹಾಸನ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹಾಸನ ನಗರ ಪೊಲೀಸರು ರಾಕೇಶ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv