ಬೆಂಗಳೂರು: ನಿನ್ನ ಮೂಗು ದಪ್ಪ ಇದೆ. ನಿನ್ನನ್ನು ಮದುವೆಯಾದರೆ ನನ್ನ ಸ್ನೇಹಿತರ ಮುಂದೆ ಅವಮಾನ ಆಗುತ್ತೆ ಎಂದು ನಿಶ್ಚಯವಾಗಿದ್ದ ಮದುವೆಯನ್ನು ಯುವತಿ ಮುರಿದಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಕೋರಮಂಗಲದ ಜ್ಯೋತಿ ಪ್ರಕಾಶ್ ಮತ್ತು ಹಿಮಬಿಂದು ಎಂಬವರ ನಡುವೆ ಮದುವೆ ನಿಶ್ಚಯವಾಗಿತ್ತು. ನಿಶ್ಚಯವಾಗಿ ಮದುವೆಯ ದಿನಾಂಕವೂ ಹತ್ತಿರ ಬಂದಿತ್ತು. ಈ ನಡುವೆ ಯುವತಿ ವಿದೇಶ ಪ್ರಯಾಣಕ್ಕೆ ತೆರಳಿದ್ದಳು. ವಿದೇಶದಿಂದ ಬಂದ ಬಳಿಕ ಜ್ಯೋತಿ ಪ್ರಕಾಶ್ ಎಷ್ಟು ಬಾರಿ ಕರೆ ಮಾಡಿದ್ರು ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಯುವತಿಯ ಸಹೋದರಿಗೆ ಕರೆ ಮಾಡಿದಾಗ ಈ ವಿಚಾರವನ್ನು ಜ್ಯೋತಿ ಪ್ರಕಾಶ್‍ಗೆ ತಿಳಿಸಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಈಗಾಗಲೇ ನಿಶ್ಚಿತಾರ್ಥ ಮುಗಿಸಿದ ಜೋಡಿ, ಇದೇ ತಿಂಗಳು ಮದುವೆ ಆಗಬೇಕಿತ್ತು. ಅಷ್ಟರಲ್ಲಿ ಮದುವೆ ಮುರಿದು ಬಿದ್ದಿದೆ.
ಇಷ್ಟಕ್ಕೆ ಸುಮ್ಮನಾಗದ ಹುಡುಗ ಹಿಮಬಿಂದುಯಿಂದ ಅವಮಾನ ಆಗಿದೆ. ಅಲ್ಲದೆ ನಿಶ್ವಿತಾರ್ಥಕ್ಕೆ 5 ಲಕ್ಷ ಹಣವನ್ನು ಖರ್ಚು ಮಾಡಿದ್ದೀನಿ. ಯುವತಿ ಹಾಗೂ ಆಕೆಯ ಮನೆಯವರು ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಸದ್ಯ ಜ್ಯೋತಿ ಪ್ರಕಾಶ್ ದೂರಿನ ಆಧಾರದ ಮೇಲೆ ಹಿಮಬಿಂದು ಮತ್ತು ಆಕೆಯ ಪೋಷಕರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.