ಬೆಂಗಳೂರು: ಮುದ್ದು ಮಗುವನ್ನ ಕಳೆದುಕೊಂಡ ತಂದೆಯ ಕಣ್ಣಲ್ಲಿ ಬತ್ತಿಲ್ಲ ಕಣ್ಣೀರು. ಹೆಂಡತಿ ಮಾಡಿದ ಕೃತ್ಯದಿಂದ ಹೊರ ಬಾರದ ತಂದೆ ಮಗುವಿನ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.
Advertisement
ಹೆತ್ತವರಿಗೆ ಹೆಗ್ಣ ಮುದ್ದು ಅನ್ನೋ ಹಾಗೆ ತಂದೆಗೆ ಪ್ರೀತಿ ಪಾತ್ರನಾಗಿದ್ದ ಮುದ್ದು ಮಗಳನ್ನ ಕಳೆದುಕೊಂಡ ಹೆತ್ತಪ್ಪನ ಕಣ್ಣಿನಲ್ಲಿ ವಾರ ಕಳೆದರೂ ಕಣ್ಣೀರು ಬತ್ತಿಲ್ಲ. ಮಗಳ ಬಗ್ಗೆ ಮಾತು ಆರಂಭಿಸುತ್ತಿದ್ದಂತೆ ಭಾವುಕರಾಗಿ ಕಿರಣ್ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡಿದ್ದಾರೆ. ಮಗು ನಾಯಿ ರೀತಿ ಅವಳ ಹಿಂದೆ ಹಿಂದೆಯೇ ಸುತ್ತಾಡ್ತಾ ಇತ್ತು. ನನಗೆ ನನ್ನ ಮಗು ದೊಡ್ಡ ಡಾಕ್ಟರ್ ಆಗೋದಾಗ್ಲಿ, ಎಂಜಿನಿಯರ್ ಆಗೋ ಆಸೆ ಇರಲಿಲ್ಲ. ನನ್ನ ಮಗು ನನ್ನ ಅಪ್ಪ ಅಂದಿದ್ರೆ ಸಾಕಾಗಿತ್ತು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?
Advertisement
Advertisement
ಹತ್ತು ವರ್ಷದಿಂದ ಕಾಯುತ್ತಾ ಇದ್ದೆ ಅಪ್ಪ ಅನ್ನೋದಕ್ಕೆ. ನಾನು ಏನೆಲ್ಲಾ ಟ್ರೈ ಮಾಡಿದ್ದೆ ಅಂದರೆ ಎಲ್ಲವನ್ನೂ ಮಾಡಿದ್ದೆ. ಅವಳು ಕೂಡ ಮಗುವನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಳು. ಇದ್ದಕ್ಕಿದ್ದಂತೆ ಯಾಕೆ ಹೀಗೆ ಮಾಡಿದ್ಲು ಅನ್ನೋದು ಗೊತ್ತಿಲ್ಲ. ಮಗು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರತಿ ಭಾನುವಾರ ಹೊರಗೆ ಕರೆದುಕೊಂಡು ಹೋಗ್ತಾ ಇದ್ದೆವು. ಡೇ ಕೇರ್ ಮಾಡ್ತಾ ಇದ್ವಿ. ಅದಕ್ಕೆ ಏನೇನೂ ಬೇಕು ಎಲ್ಲಾ ಮನೆಯಲ್ಲೆ ಸಿದ್ಧತೆ ಮಾಡಿಕೊಂಡಿದ್ವಿ. ಇದ್ದಕ್ಕಿದ್ದಂತೆ ಯಾಕೆ ಈ ತೀರ್ಮಾನ ಮಾಡಿದ್ಲು ಅನ್ನೋದು ತಿಳಿಯುತ್ತಿಲ್ಲ. ಮಗು ಸ್ವಲ್ಪ ಹಠ ಮಾಡುತ್ತಿತ್ತು. ಯಾವ ಮಗು ಹಠ ಮಾಡೊಲ್ಲ ಹೇಳಿ ಎಲ್ಲಾ ಮಕ್ಕಳು ಹಠ ಮಾಡ್ತಾರೆ. ಇದಕ್ಕೆ ಬುದ್ಧಿ ಬೆಳವಣಿಗೆ ಆಗಿರಲಿಲ್ಲ. ತುಂಬಾ ಕಷ್ಟ ಪಡುತ್ತಾ ಇತ್ತು ಎಂದರು.
Advertisement
ಆ ಮಗು ಬಿಸಾಡಿದಾಗ ಮನೆಯಲ್ಲಿಯೇ ಇದ್ದೆ. ನಾನೇ ಆಸ್ಪತ್ರೆಗೆ ಕರೆದುಕೊಂಡು ಓಡಿ ಹೋದೆ ಮಗು ಬದುಕಲಿಲ್ಲ. ಆದರೆ ಅವಳ ಮನಸ್ಥಿತಿ ಏನಿತ್ತು ಅನ್ನೋದು ಗೊತ್ತಿಲ್ಲ.ನನ್ನ ಮಗು ನಾರ್ಮಲ್ ಆಗಿದ್ರೆ ಅಷ್ಟೇ ಸಾಕಾಗಿತ್ತು ಮಗುವನ್ನು ದೊಡ್ಡವಳು ಮಾಡಿ ಮದುವೆ ಮಾಡಬೇಕು ಅನ್ನೋ ಆಸೆ ಇರಲಿಲ್ಲ ಜೀವಂತವಾಗಿ ಕೊನೆಯ ತನಕ ನನ್ನ ಜೊತೆಯಲ್ಲಿ ಇದ್ದಿದ್ರೆ ಸಾಕಾಗಿತ್ತು ಕಣ್ಣಿರು ಹಾಕಿದ ತಂದೆ ಕಿರಣ್. ಮಗಳನ್ನ ಕೊಲೆ ಮಾಡಿದ ಪತ್ನಿಯ ಬಗ್ಗೆ ಮಾತನಾಡಲು ನಿರಾಕರಣೆ ಮಾಡಿದರು.