ಬೆಂಗಳೂರು: ಪೊಲೀಸರ ದುರ್ವರ್ತನೆಗೆ ಮನನೊಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
ವೈಟ್‍ಫೀಲ್ಡ್ ಠಾಣೆಯ ಪಿಎಸ್‍ಐ ಸೋಮಶೇಖರ್, ಮುಖ್ಯ ಪೇದೆ ರೋಷನ್ ಅಲಿಖಾನ್ ವಿರುದ್ಧ ಯುವತಿ ಶಿಲ್ಪಾ ಹಾಗೂ ಆತನ ಗೆಳೆಯ ಷಡ್ಯಂತ್ರ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಹೇಂದ್ರ ಆಟೋ ಡ್ರೈವರ್‍ವೊಬ್ಬರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಆರೋಪಿ ಮಹೇಂದ್ರನನ್ನು ಠಾಣೆಗೆ ಕರೆಸಿ ಪಿಎಸ್‍ಐ ಸೋಮಶೇಖರ್ ಹಾಗೂ ಮುಖ್ಯ ಪೇದೆ ರೋಷನ್ ಅಲಿಖಾನ್ ಎಚ್ಚರಿಕೆ ನೀಡಿದ್ದರು.
Advertisement
Advertisement
ಇದರಿಂದ ಮಹೇಂದ್ರನ ಗೆಳತಿ ಶಿಲ್ಪಾ ಆತ್ಮಹತ್ಯೆ ಯತ್ನ ನಾಟಕವಾಡಿ ಪೊಲೀಸರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯುವತಿ ಪೊಲೀಸ್ ಠಾಣೆಗೆ ದೂರನ್ನೇ ನೀಡಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿ ತನ್ನ ಗೆಳೆಯನಿಗಾಗಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.
Advertisement
ನಡೆದಿದ್ದೇನು?: ಬುಧವಾರದಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕಾಡುಗೋಡಿಯ ಪಟಾಲಮ್ಮ ಲೇಔಟ್ ನಲ್ಲಿ ನಡೆದಿತ್ತು. ಪಟಾಲಮ್ಮ ಲೇಔಟ್ ನಿವಾಸಿಯಾದ ಶಿಕ್ಷಕಿ ಶಿಲ್ಪಾ ದೇವಾಲಯಕ್ಕೆ ತೆರಳುತ್ತಿದ್ದಾಗ ಬೈಕ್ ವಿಲೀಂಗ್ ಮಾಡಿ ಯುವಕರ ಗುಂಪು ಚುಡಾಯಿಸಿದ್ದಾರೆ. ಚುಡಾಯಿಸಿದ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಠಾಣೆಯ ಪಿಎಸ್‍ಐ ಸೋಮಶೇಖರ್ ಮತ್ತು ಮುಖ್ಯ ಪೇದೆ ರೋಷನ್ ಆಲಿಖಾನ್ ನನ್ನನ್ನು ಐದು ಗಂಟೆಗೂ ಹೆಚ್ಚು ಕಾಲ ಕಾಯಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೊತೆಗೆ ಜಾತಿನಿಂದನೆ ಮಾಡಿದಲ್ಲದೇ ನಿರ್ಲಕ್ಷ್ಯತನದಿಂದ ದೂರು ಸ್ವೀಕರಿಸಿದ್ದಾರೆ. ದೂರು ನೀಡಲು ಹೋದಾಗ ನೀನು ರೋಡಲ್ಲಿ ಯಾಕ್ ಓಡಾಡುತ್ತೀಯಾ, ಮನೆಯಲ್ಲಿ ಇರು, ಇದೆಲ್ಲಾ ಕಾಮನ್. ನೀವು ಯಾವ ಜಾತಿ ಎಂದು ವಿಚಾರಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು.
Advertisement
ವಿಷಯ ತಿಳಿದ ಮಹೇಂದ್ರ ಶಿಲ್ಪಾಳನ್ನು ವೈಟ್ ಫೀಲ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.