ಬೀಜಿಂಗ್: ಮದ್ಯಪಾನ, ಧೂಮಪಾನ ಹೀಗೆ ಅನೇಕ ರೀತಿಯ ಚಟಗಳನ್ನು ಬೆಳೆಸಿಕೊಂಡಿದ್ದವರನ್ನು ನೋಡಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಚೀನಾದ (China) ಬಾಲಕಿ ತನ್ನ ಕೂದಲನ್ನು (Hair) ತಿನ್ನುವ ವಿಚಿತ್ರ ಚಟವನ್ನು ಹೊಂದಿದ್ದಳು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಚೀನಾದ ಶಾಂಕ್ಸಿ ಪ್ರಾಂತ್ಯದ ಪಿಕಾ (14) ಎಂಬ ಯುವತಿಗೆ (Girl) ಕೂದಲನ್ನು ಅಗೆಯುವ ಚಟವಿತ್ತು. ಅವಳು ಹೀಗೆ ಅಗೆಯುತ್ತಾ ಅಗೆಯುತ್ತಾ ತನ್ನ ತಲೆಯಲ್ಲಿದ್ದ ಬರೊಬ್ಬರಿ 3 ಕೆಜಿ ಕೂದಲನ್ನು ತಿಂದಿದ್ದಾಳೆ. ಇದರ ಪರಿಣಾಮವಾಗಿ ಆಕೆಯ ತಲೆ ಬೋಳಾಗಿದೆ. ಆದರೆ ಪಿಕಾ ತಂದೆ- ತಾಯಿ ಕೆಲಸದ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಅಜ್ಜಿಯ ಜೊತೆ ಇದ್ದಳು. ಅಜ್ಜಿಗೆ ವಯಸ್ಸಾಗಿದ್ದರಿಂದ ಪಿಕಾಳಿಗೆ ತುಂಬಾ ಗಂಭೀರವಾಗುವವರೆಗೂ ಅಸ್ವಸ್ಥತೆಯನ್ನು ಗಮನಿಸಲಿಲ್ಲ.
Advertisement
Advertisement
ಪಿಕಾಳಿಗೆ ದಿನ ಕಳೆದಂತೆ ಆಹಾರವನ್ನು ಸೇವಿಸಲು ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಗೆ ಮೊದಲಿಗೆ ಕಾರಣ ತಿಳಿದಿರಲಿಲ್ಲ. ಇದರಿಂದಾಗಿ ಪಿಕಾಗೆ ಸ್ಕ್ಯಾನ್ ಮಾಡಲು ತಿಳಿಸಿದ್ದಾರೆ. ನಂತರ ಸ್ಕ್ಯಾನಿಂಗ್ ರಿಪೋರ್ಟ್‍ನಲ್ಲಿ ಕಂಡು ಬಂದಿದ್ದ ಕೂದಲನ್ನು ನೋಡಿ ದಂಗಾಗಿದ್ದಾರೆ. ಕೂದಲು ಹೊಟ್ಟೆಯ ತುಂಬೆಲ್ಲಾ ಇದ್ದು, ಕರುಳು ಕೂಡ ಬ್ಲಾಕ್ ಆಗಿತ್ತು.
Advertisement
ಈ ಹಿನ್ನೆಲೆಯಲ್ಲಿ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿಕಾ ಒಪ್ಪಿಕೊಂಡಳು. ಅದಾದ ಬಳಿಕ ವೈದ್ಯರು (Doctor) ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಉಂಡೆಯನ್ನು ತೆಗೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್, ಮಗು ಸಾವು, 24 ಮಂದಿಗೆ ಗಾಯ
Advertisement
ಈ ಬಗ್ಗೆ ವೈದ್ಯರು ಮಾತನಾಡಿ, ಆಕೆ ಕೆಲವು ವರ್ಷಗಳಿಂದ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೂದಲನ್ನು ತಿನ್ನುವ ಚಟವನ್ನು ಬೆಳಸಿಕೊಂಡಳು ಎಂದು ತಿಳಿಸಿದರು. ಇದನ್ನೂ ಓದಿ: 25 ದಿನದ ಬಳಿಕ KRS ಬೃಂದಾವನ ಪ್ರವಾಸಿಗರಿಗೆ ಓಪನ್