– ವಾನರ ಕಾಟದಿಂದ ಬೇಸತ್ತು ಸರ್ಕಾರಿ ಕಚೇರಿ ಕೆಲಸವನ್ನೇ ತೊರೆದ್ರು
ಚಿಕ್ಕಬಳ್ಳಾಪುರ: ಹೆಣ್ಣು ಮಕ್ಕಳನ್ನ ಕಂಡ್ರೇ ಸಾಕು ಕೋತಿಗಳು ಗುರ್ ಗುರ್ ಅಂತ ಮೈ ಮೇಲೆ ಬೀಳುತ್ತವೆ. ಅಲ್ಲದೇ ಅವರ ಮೈಮೇಲಿದ್ದ ಬಟ್ಟೆ ಕಿತ್ಕೊಂಡು ಹೋಗುತ್ತಿವೆ. ಕೋತಿಗಳ ಕೀಟಲೆಯಿಂದ ಬೇಸತ್ತು ಕೆಲಸಾನೇ ಬೇಡ ಅಂತ ಸರ್ಕಾರಿ ಕಚೇರಿಯ ಕೆಲಸನೂ ಬಿಟ್ಟು ಮನೆ ಸೇರ್ತಿದ್ದಾರೆ.
Advertisement
ಹೌದು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೋತಿಗಳದ್ದೇ ಕಾರುಬಾರು. ವಿಧಾನಸೌಧದ ಮಾದರಿಯ ಈ ಹೈಟೆಕ್ ಜಿಲ್ಲಾಡಳಿತ ಭವನದಲ್ಲಿ ಎತ್ತ ನೋಡಿದರೂ ವಾನರ ಸೈನ್ಯದ್ದೇ ರಾಜ್ಯಭಾರ. ಹೀಗಾಗಿ ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡೋ ಸಿಬ್ಬಂದಿ ಹಾಗೂ ಸರ್ಕಾರಿ ಕೆಲಸ ಕಾರ್ಯಗಳಿಗೆ ಅಂತ ಭವನಕ್ಕೆ ಬರೋ ಸಾರ್ವಜನಿಕರು ಈ ಕೋತಿಗಳ ಕಾಟ ತಾಳಲಾರದೆ ಬೇಸತ್ತು ಹೋಗಿದ್ದಾರೆ. ಪ್ರಮುಖವಾಗಿ ಜಿಲ್ಲಾಡಳಿತ ಭವನದಲ್ಲಿ ಮಹಿಳೆಯರನ್ನ ಕಂಡ್ರೆ ಸಾಕು ಮೈ ಮೇಲೆ ಬಿದ್ದು ಬಟ್ಟೆ ಬರೆ ಕಸಿದುಕೊಂಡು ಹೋಗುತ್ತವೆ ಅಂತ ಮಹಿಳಾ ಸಿಬ್ಬಂದಿ ಸುಶೀಲ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
Advertisement
Advertisement
ಈ ಮಂಗಗಳು ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಕಾಟ ಕೊಡ್ತಿವೆ. ಇನ್ನು ಸರ್ಕಾರಿ ಕಚೇರಿಗಳಿಗೆ ಬರೋ ಸಾರ್ವಜನಿಕರು ಕೈಯಲ್ಲಿ ಏನೂ ಹಿಡಿದು ತರುವಂತಿಲ್ಲ. ಸರ್ಕಾರಿ ದಾಖಲೆಗಳಾದ್ರೂ ಸರಿ ಏನಾದ್ರೂ ಸರಿ ಬ್ಯಾಗ್ ಸಮೇತ ಕಿತ್ಕೊಂಡು ಹೋಗ್ತಿವೆ. ಹೀಗಾಗಿ ಏನಪ್ಪಾ ಕೋತಿಗಳ ಕಾಟ ಜಿಲ್ಲಾಡಳಿತ ಭವನ್ಕಕೆ ಬರೋದಾದ್ರು ಹೇಗೆ ಅಂತ ಸಾರ್ವಜನಿಕ ನಾರಾಯಣ ಸ್ವಾಮಿ ಪ್ರಶ್ನಿಸುತ್ತಿದ್ದಾರೆ.
Advertisement
ಕೋತಿಗಳ ಕಾಟಕ್ಕೆ ಕಚೇರಿಗಳಲ್ಲಿ ಸಿಬ್ಬಂದಿ ಬಾಗಿಲು ಹಾಕ್ಕೊಂಡು ಕೆಲಸ ಮಾಡುವಂತಾಗಿದ್ದು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸಹ ಕೋತಿಗಳ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಹೇಗಪ್ಪಾ ಕೋತಿ ಕಾಟ ತಡೆಯೋದು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಓಟ್ನಲ್ಲಿ ಕೋತಿಗಳ ಕಾಟದಿಂದ ಕೆಲವರು ಕೆಲಸ ಬಿಟ್ಟಿದ್ರೇ, ಸಾರ್ವಜನಿಕರು ಸರ್ಕಾರಿ ಕಚೇರಿಗೋ ಬರೋಕೆ ಭಯ ಬೀಳುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv