ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಪಿಎಸ್‍ಐ ಪ್ರಕಾಶ ರಾಠೋಡ ಯುವತಿಯೊಬ್ಬರನ್ನ ಪ್ರೀತಿಸಿ ವಂಚಿಸಿದ ಆರೋಪ ಕೇಳಿಬಂದಿದೆ. ಅಲ್ಲದೆ ಯುವತಿಯರಿಗೆ ಮೆಸೆಜ್ ಮಾಡಿ ರೇಗಿಸುತ್ತಿದ್ದರು ಎಂದು ಆರೋಪ ಮಾಡಲಾಗಿದೆ.
ಪ್ರಕಾಶ ರಾಠೋಡ ಯುವತಿಯರಿಗೆ ಮೆಸೇಜ್ ಮಾಡಿ ರೇಗಿಸುತ್ತಿದ್ದರು ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬನಹಟ್ಟಿಯ ಯುವತಿಯೊಬ್ಬರು ಆರೋಪಿಸಿದ್ದಾರೆ. ಸದ್ಯ ಇಂಡಿ ತಾಲೂಕು ಹೊರ್ತಿ ಠಾಣೆಯ ಪಿಎಸ್‍ಐ ಆಗಿರುವ ಪ್ರಕಾಶ ರಾಠೋಡ ಬನಹಟ್ಟಿ ಪೊಲೀಸ್ ಠಾಣೆ ಪಿಎಸ್‍ಐ ಆಗಿದ್ದಾಗ ಯುವತಿಯರಿಗೆ ಮೆಸೆಜ್ ಮಾಡ್ತಿದ್ದರು. ಬನಹಟ್ಟಿ ಠಾಣೆಗೆ ಪಾಸ್‍ಪೋರ್ಟ್, ವೀಸಾಗಾಗಿ ಬರುತ್ತಿದ್ದ ಯುವತಿಯರ ವಾಟ್ಸಾಪ್ ನಂಬರ್ ಕದಿಯುತ್ತಿದ್ದರು. ನಂತರ ಯುವತಿಯರಿಗೆ ಮೆಸೇಜ್ ಮಾಡಿ ರೇಗಿಸುತ್ತಿದ್ದರು. ವಿರೋಧಿಸುತ್ತಿದ್ದ ಯುವತಿಯರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ಸಂತ್ರಸ್ತ ಯುವತಿ ಆರೋಪ ಮಾಡಿ ಬಾಗಲಕೋಟೆ ಎಸ್‍ಪಿ ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರಾದ ಸಂತ್ರಸ್ತೆಯೊಂದಿಗೆ ಪ್ರಾಕಶ ರಾಠೋಡ ಬನಹಟ್ಟಿಯಲ್ಲಿ ಕಾರ್ಯನಿರ್ವಹಿಸುವಾಗ ವಾಟ್ಸಪ್ ನಲ್ಲಿ ಚ್ಯಾಟ್ ಮಾಡಿ ಸ್ನೇಹ ಬೆಳಸಿದ್ದು, ನಂತರ ಒಬ್ಬರನ್ನೊಬ್ಬರು ಪ್ರಿತಿಸಿದ್ದರು. ಆದ್ರೆ ಪ್ರಕಾಶ ವಿಜಯಪುರದ ಇಂಡಿ ತಾಲೂಕಿನ ಹೊರ್ತಿ ಠಾಣೆಗೆ ವರ್ಗಾವಣೆ ಆದ ಮೇಲೆ ಸಂತ್ರಸ್ತೆಯನ್ನು ದೂರ ಇಟ್ಟಿದ್ದಾರೆ ಎನ್ನಲಾಗಿದೆ.
ಇದರಿಂದ ಮನನೊಂದು ಸಂತ್ರಸ್ತೆ ಬಾಗಲಕೋಟೆ ಎಸ್‍ಪಿಗೆ ದೂರು ನೀಡಿದ್ದಾರೆ.