16ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರ ಬಂಧನ

Advertisements

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisements

ಆರೋಪಿಗಳಲ್ಲಿ ಒಬ್ಬ ಮರ್ಚೆಂಟ್ ನೇವಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಹಿಸ್ಟರಿ ಶೀಟರ್ ಆಗಿದ್ದಾನೆ. ಆಗಸ್ಟ್ 26 ರಂದು ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇಶದ ದೈತ್ಯ ಅವಳಿ ಕಟ್ಟಡ ನೆಲಸಮ – ಅಕ್ಕಪಕ್ಕದ ಕಾಂಪ್ಲೆಕ್ಸ್‌ಗಳ ಗೋಡೆ, ಕಿಟಕಿಗಳು ಡ್ಯಾಮೇಜ್

Advertisements

ಶುಕ್ರವಾರ ಮಧ್ಯಾಹ್ನ ಆರೋಪಿಗಳು ಬಾಲಕಿಯನ್ನು ಭಿವಂಡಿಯ ಕಲ್ಹೇರ್‌ನಲ್ಲಿರುವ ಫ್ಲಾಟ್‌ಗೆ ಕರೆದೊಯ್ದರು. ಬಾಲಕಿ ಕೈಗಳನ್ನು ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಣೆ ನಗರದ ವಾಗ್ಲೆ ಎಸ್ಟೇಟ್ ವಿಭಾಗದ ಚಿತಾಲ್ಸರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಸಚಿನ್ ಕಾಂಬ್ಳೆ (30), ಆಕಾಶ್ ಕನೋಜಿಯಾ (22) ಮತ್ತು ಅಸು (20) ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಮತ್ತು ಆರೋಪಿಗಳು ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ಮಾಲ್‍ನಲ್ಲಿ ನಮಾಜ್- ಭಜರಂಗದಳದಿಂದ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ

Advertisements

ಮೂವರು ಆರೋಪಿಗಳ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Live Tv

Advertisements
Exit mobile version