ಹಿಂದಿ ಹಾಗೂ ಮರಾಠಿ ನಟಿ ಗಿರಿಜಾ ಓಕ್ (Girija Oak) ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದರು. ನೀಲಿ ಸೀರೆಯಲ್ಲಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‍ಚಲ್ ಎಬ್ಬಿಸಿದ್ದವು. ಕೆಲವು ತಮಾಷೆ ತಮಾಷೆಯಾದ ಮೀಮ್ಸ್‌ಗಳು ಕೂಡಾ ವೈರಲ್ ಆಗಿದ್ದವು. ಇದೆಲ್ಲದಕ್ಕೂ ಖುಷಿಯನ್ನ ವ್ಯಕ್ತಪಡಿಸಿದ್ದ ನಟಿಗೆ ಎಐ ಹಾಗೂ ಮಾರ್ಫಿಂಗ್ ಮಾಡಿರುವ ಅಶ್ಲೀಲ ಫೋಟೋಗಳು ಆತಂಕ್ಕೀಡುಮಾಡಿವೆ.
ಅಂದಹಾಗೆ ನಟಿ ಗಿರಿಜಾ ಅವರಿಗೆ 12 ವರ್ಷದ ಮಗನಿದ್ದು, ಮುಂದಿನ ದಿನಗಳಲ್ಲಿ ಆ ಫೋಟೋಗಳು ಆತನಿಗೆ ಲಭ್ಯವಾದ ಸಂದರ್ಭ ನೆನೆದರೆ ಭಯವಾಗುತ್ತೆ ಎನ್ನುವ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಅಶ್ಲೀಲ ಫೋಟೋಗಳು ನನ್ನ ಗಮನಕ್ಕೆ ಬಂದಿದೆ. ಈಗ ನನ್ನ ಮಗ ಸೋಶಿಯಲ್ ಮೀಡಿಯಾ ಬಳಸುತ್ತಿಲ್ಲ. ದಯವಿಟ್ಟು ಈ ರೀತಿಯಾಗಿ ಅಶ್ಲೀಲವಾಗಿ ಫೋಟೋಗಳನ್ನ ಹರಡುವುದನ್ನ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಚಿತ್ರದಲ್ಲಿ ಮೇಘನಾ ರಾಜ್?
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಪೂರಕವೋ ಅಷ್ಟೇ ಮಾರಕವಾಗಿ ಪರಿಣಮಿಸುತ್ತಿವೆ. ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ನಟಿ ಗಿರಿಜಾ ಅವರ ಫೋಟೋಗಳನ್ನ ವಿರೂಪಗೊಳಿಸಿದ ಕೇಡಿಗಳ ಬಗ್ಗೆ ಇನ್ನು ದೂರು ದಾಖಲು ಮಾಡಿಲ್ಲ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಮನವಿಯನ್ನ ಮಾಡಿದ್ದಾರೆ ನಟಿ. ಮುಂದಿನ ದಿನಗಳಲ್ಲಿ ಆ ಕಿಡಿಗೇಡಿಗಳ ವಿರುದ್ಧ ಠಾಣೆ ಮೆಟ್ಟಿಲು ಹತ್ತಿದರೂ ಆಶ್ಚರ್ಯವಿಲ್ಲ. ಇದನ್ನೂ ಓದಿ: `ಲಕುಮಿ’ ನಟಿಗೆ ಕೂಡಿ ಬಂತು ಕಂಕಣ ಭಾಗ್ಯ

