ಜನಪ್ರಿಯ ‘ಗಿಣಿರಾಮ’ (Ginirama) ಸೀರಿಯಲ್ ನಟಿ ಕಾವೇರಿ ಬಾಗಲಕೋಟೆ(Kaveri Bagalakote) ಅವರು ಇದೀಗ ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. 8 ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಈ ಕುರಿತು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಗಿಣಿರಾಮ’ ಸೀರಿಯಲ್ ಯಾರಿಗೆ ಗೊತ್ತಿಲ್ಲ ಹೇಳಿ.. ಶಿವರಾಮ ಮತ್ತು ಮಹತಿ ಪಾತ್ರ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಅಷ್ಟರ ಮಟ್ಟಿಗೆ ಸೀರಿಯಲ್ ಖ್ಯಾತಿಯನ್ನ ಪಡೆದಿದೆ. ಶಿವರಾಮನ ಮುದ್ದಿನ ತಂಗಿ ಸೀಮಾ ಪಾತ್ರದಲ್ಲಿ ಕಾವೇರಿ ಅದ್ಭುತವಾಗಿ ನಟಿಸಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ ನಟಿ ಸೀರಿಯಲ್‌ನಿಂದ ಹೊರಬಂದರು. ಈಗ ಮದುವೆ ಬಗ್ಗೆ ನಟಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಎಲ್ಲರಿಗೂ ನಮಸ್ಕಾರ ನಮ್ಮ 8 ವರ್ಷದ ಪ್ರೀತಿಯ ಕನಸು ನನಸಾಯಿತು. ಇವತ್ತು ಹಣ್ಣು ಇಡುವ ಶಾಸ್ತ್ರ ಆಯಿತು. ನಾನು ಸೈನಿಕನ ಹೆಂಡತಿ ಆಗುವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ” ಎಂದು ಕಾವೇರಿ ಬಾಗಲಕೋಟೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕೆ ‘ಟೋಬಿ’ ಎಂದು ಹೆಸರಿಟ್ಟು ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಾಜ್ ಬಿ ಶೆಟ್ಟಿ
ಸೀರಿಯಲ್‌ನಿಂದ ಹೊರ ಬಂದ ಮೇಲೆ ನಟಿ ಕಾವೇರಿ, ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡ್ತಿದ್ದಾರೆ. ಈಗ ಕಾವೇರಿ, ವಿಠ್ಠಲ್ ಹಿರಣ್ಣನವರ್ (Vittal) ಅವರನ್ನ ಮದುವೆಯಾಗುತ್ತಿದ್ದಾರೆ. ಮದುವೆ ಯಾವಾಗ? ಏನು ಎಂಬುದರ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ನಟಿ ಮದುವೆ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.