ಮಳೆಗಾಳ ಆರಂಭವಾಗಿದ್ದು, ಮಳೆಯಲ್ಲಿ ನೆನೆದರೆ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಸಹಾ ನೆಗಡಿ, ಕೆಮ್ಮು ಪ್ರಾರಂಭವಾಗುತ್ತದೆ. ಈ ರೀತಿಯ ಅನಾರೋಗ್ಯಕ್ಕೆ ಬಿಸಿಬಿಸಿಯಾದ ಶುಂಠಿ ಮತ್ತು ಬೆಳ್ಳುಳ್ಳಿ ಸೂಪ್ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಅಡಗಿದ್ದು, ತುಂಬಾ ಸಿಂಪಲ್ ಆಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ ಹಸಿವನ್ನೂ ನೀಗಿಸುತ್ತದೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ತರಕಾರಿ ಖಾಲಿ ಆಗಿದ್ರೆ ಸೇವ್ ಬಳಸಿ ಮಾಡಿ ಸ್ಪೈಸಿ ಪಲ್ಯ
Advertisement
ಬೇಕಾಗುವ ಸಾಮಗ್ರಿಗಳು:
ಕರಿಮೆಣಸು – 20 ಕಾಳು
ಶುಂಠಿ – ಅಗತ್ಯಕ್ಕೆ ತಕ್ಕಷ್ಟು
ಬೆಳ್ಳುಳ್ಳಿ – 6 ಎಸಳು
ತುಪ್ಪ – ಅರ್ಧ ಚಮಚ
ಹೆಚ್ಚಿದ ಎಲೆಕೋಸು – 2 ಚಮಚ
ಸಣ್ಣದಾಗಿ ಹೆಚ್ಚಿದ ಕ್ಯಾರೆಟ್ – 2 ಚಮಚ
ನೀರು – 3 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಜೋಳದ ಹಿಟ್ಟು – 1 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕರಿಮೆಣಸನ್ನು ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬೌಲ್‌ನಲ್ಲಿ ತೆಗೆದಿಟ್ಟುಕೊಳ್ಳಿ. ಬಳಿಕ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ಹಾಕಿ ಜಜ್ಜಿಕೊಂಡು ಪೇಸ್ಟ್ ಮಾಡಿಕೊಳ್ಳಿ.
* ಬಳಿಕ ಒಂದು ಪಾತ್ರೆಗೆ ಅರ್ಧ ಚಮಚ ತುಪ್ಪ ಹಾಕಿಕೊಂಡು ನಂತರ ಅದಕ್ಕೆ ಜಜ್ಜಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಲೋ ಫ್ಲೇಮ್‌ನಲ್ಲಿ ಫ್ರೈ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ಹೆಚ್ಚಿದ ಎಲೆಕೋಸು ಮತ್ತು ಕ್ಯಾರೆಟ್ ಅನ್ನು ಹಾಕಿಕೊಂಡು ಒಂದರಿಂದ 2 ನಿಮಿಷಗಳವರೆಗೆ ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಬಳಿಕ ಇದಕ್ಕೆ 2 ಕಪ್ ನೀರನ್ನು ಸೇರಿಸಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಕುದಿಸಿಕೊಳ್ಳಿ.
* ಈಗ ಒಂದು ಬೌಲಿನಲ್ಲಿ ಒಂದು ಚಮಚ ಜೋಳದ ಹಿಟ್ಟನ್ನು ಹಾಕಿಕೊಂಡು ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಗಂಟಾಗದಂತೆ ತಿರುವಿಕೊಳ್ಳಿ.
* ಈಗ ಇದಕ್ಕೆ ಕುಟ್ಟಿ ಪುಡಿ ಮಾಡಿದ ಕರಿಮೆಣಸಿನ ಪುಡಿಯನ್ನು ಹಾಕಿಕೊಂಡು ಬಳಿಕ ಇದಕ್ಕೆ ಜೋಳದ ನೀರನ್ನು ಹಾಕಿಕೊಳ್ಳಬೇಕು. ಬಳಿಕ ಉಪ್ಪು ಕಡಿಮೆಯಿದ್ದರೆ ಹಾಕಿಕೊಂಡು 2ರಿಂದ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಬಿಸಿಬಿಸಿಯಾದ ಶುಂಠಿ ಬೆಳ್ಳುಳ್ಳಿ ಸೂಪ್ ಸವಿಯಲು ರೆಡಿ.
* ಇದನ್ನು ಒಂದು ಬೌಲ್‌ನಲ್ಲಿ ಹಾಕಿ ಕುಡಿಯಲು ಕೊಡಿ. ಮಕ್ಕಳು ಹಸಿವಾಗುವುದಿಲ್ಲ ಎಂದಾಗ ಈ ರೀತಿಯಾದ ಸೂಪ್ ಅನ್ನು ಕೊಡುವುದರಿಂದ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ
Advertisement
Web Stories