ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಈ ವಾರದ ಕಳಪೆ ಗಿಲ್ಲಿ (Gilli) ನಟನಿಗೆ ಸಿಕ್ಕಿದೆ. ಮನೆಮಂದಿಯೆಲ್ಲ ಸೇರಿ ಗಿಲ್ಲಿ ವಿರುದ್ಧ ಸಿಟ್ಟನ್ನು ಹೊರಹಾಕಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೊದಲ್ಲಿ ಈ ದೃಶ್ಯ ಕಂಡುಬಂದಿದೆ.
ಗಿಲ್ಲಿ ಕಾಮಿಡಿ ಕೆಲವೊಮ್ಮೆ ಅತಿರೇಕ ಎನಿಸುತ್ತದೆ. ಕೆಲವೊಮ್ಮೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮಾತಾಡ್ತಾರೆ. ಕಿರಿಕಿರಿ ಎನಿಸುತ್ತದೆ ಎಂಬುದು ಬಹುತೇಕ ಕಂಟೆಸ್ಟೆಂಟ್‌ಗಳ ಆರೋಪವಾಗಿದೆ. ಈ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲೂ ಅನೇಕರು ಗಿಲ್ಲಿ ಕಾಮಿಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈಗ ಅದೇ ವಿಚಾರ ಮುಂದಿಟ್ಟುಕೊಂಡು ಗಿಲ್ಲಿಗೆ ಕಳಪೆ ಕೊಟ್ಟಂತಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮೊದಲ ಜೋಡಿ ಕ್ಯಾಪ್ಟನ್ – ಟಾಸ್ಕ್ ಆಡದೇ ಕ್ಯಾಪ್ಟನ್ ಆದ ಸ್ಪಂದನಾ
ಈ ವಾರದ ಕಳಪೆ ‘ಗಿಲ್ಲಿ’
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/DG1EtRzQkx
— Colors Kannada (@ColorsKannada) December 5, 2025
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಗಿಲ್ಲಿ ಮತ್ತು ಅಶ್ವಿನಿ ಅಂದ್ರೆ ಎಣ್ಣೆ-ಸೀಗೆಕಾಯಿ ಎನ್ನುವಂತಿತ್ತು. ಇವರು ಜಗಳ ಮಾಡದ ದಿನವೇ ಇಲ್ಲ ಅನ್ನೋ ಹಾಗಿತ್ತು. ಆದ್ರೆ, ಸ್ಪೆಷಲ್ ಗೆಸ್ಟ್‌ಗಳ ಎಂಟ್ರಿ ಬಳಿಕ ಇಬ್ಬರೂ ಫ್ರೆಂಡ್ಸ್ ಥರ ಆದ್ರು. ನಿನ್ನ ಸಪೋರ್ಟ್‌ಗೆ ನಾನಿರ್ತೀನಿ ಅಂತ ಗಿಲ್ಲಿಗೆ ಅಶ್ವಿನಿ ಹೇಳಿದ್ದೂ ಉಂಟು. ಜಗಳ ಮರೆತು ಒಂದಾಗಿದ್ದರು. ಆದ್ರೀಗ ಪ್ರೋಮೊ ಗಮನಿಸಿದರೆ ಗಿಲ್ಲಿ ವಿರುದ್ಧ ಅಶ್ವಿನಿ ಮತ್ತೆ ರೆಬಲ್ ಆದಂತೆ ಕಾಣ್ತಿದೆ. ‘ನಮ್ಮ ವಿಚಾರ ನಿಮ್ಮ ಪ್ರಚಾರ ಆಗ್ಬಿಟ್ಟಿದೆ’ ಅಂತ ಟಾರ್ಗೆಟ್ ಮಾಡಿ ಮಾತಾಡಿದ್ದಾರೆ.
ಇನ್ನು ಕುಚಿಕು ಗೆಳೆಯನಂತಿದ್ದ ರಘು ಕೂಡ ಕೆಲ ದಿನಗಳಿಂದ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಮ್ಮೆ ಇಬ್ಬರ ಜಗಳ ಅತಿರೇಕಕ್ಕೆ ಹೋದ ಪ್ರಸಂಗವೂ ನಡೆಯಿತು. ಇದರ ನಡುವೆಯೂ ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರೂ, ಮೊದಲಿನಂಥ ಆತ್ಮೀಯತೆ ಕಾಣ್ತಿಲ್ಲ. ರಘು ಕೂಡ ಕಾಮಿಡಿ ವಿಚಾರವನ್ನೇ ಮುಂದಿಟ್ಟು ಗಿಲ್ಲಿಗೆ ಕಳಪೆ ಪಟ್ಟ ಕಟ್ಟಿದ್ದಾರೆ. ಇದನ್ನೂ ಓದಿ: ಆದಿ ಲಕ್ಷ್ಮಿ ಪುರಾಣ ಧಾರಾವಾಹಿ – ಒಡಹುಟ್ಟಿದವರ ಕಥನ
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಕೂಡ ಗಿಲ್ಲಿ ವಿರುದ್ಧ ವಾಯ್ಸ್ ರೈಸ್ ಮಾಡಿದ್ದಾರೆ. ವಯಸ್ಸಿನ ವಿಚಾರ ಮುಂದಿಟ್ಟು ನಿನ್ನ ಆಟ ನನ್ ಹತ್ರ ನಡೆಯಲ್ಲ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇಬ್ಬರ ನಡುವೆ ಜಟಾಪಟಿ ನಡೆದಿದೆ. ಇನ್ನು ಯಾರ‍್ಯಾರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ? ಅದಕ್ಕೆ ಕಾರಣ ಏನು ಕೊಡ್ತಾರೆ ಎಂಬುದು ಕುತೂಹಲ ಮೂಡಿಸಿದೆ.

