ಬಿಗ್ ಬಾಸ್ (Bigg Boss) ಮನೆ ಒಳಗೂ ಹೊರಗೂ ಅದೊಂದು ಕುತೂಹಲವಿತ್ತು. ಗಿಲ್ಲಿ (Gilli) ಕ್ಯಾಪ್ಟನ್ ಆದ್ರೆ ಹೇಗಿರುತ್ತೆ? ಕೊನೆಗೂ ಆ ಕ್ಷಣ ಬಂದೇ ಬಿಡ್ತು. ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅದೂ, ಮನೆಯ ತನ್ನ ಎದುರಾಳಿ ಅಶ್ವಿನಿ ಗೌಡ ವಿರುದ್ಧ ಗೆದ್ದು ಗಿಲ್ಲಿ ಪಟ್ಟಕ್ಕೇರಿದ್ದಾರೆ. ಕ್ಯಾಪ್ಟನ್ ರೂಮ್‌ಗೆ ಡಿಫರೆಂಟ್ ಲುಕ್‌ನಲ್ಲಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಫ್ಯಾಮಿಲಿ ವೀಕ್‌ನಲ್ಲಿ ಕಂಟೆಸ್ಟೆಂಟ್‌ಗಳ ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಮನೆಯಲ್ಲಿ ಹಾಡಿ-ಕುಣಿದು, ಟಾಸ್ಕ್‌ಗಳನ್ನು ಆಡಿ ಎಂಜಾಯ್ ಮಾಡಿದ್ರು. ಈ ಬಾರಿ ಕ್ಯಾಪ್ಟನ್ ಅಭ್ಯರ್ಥಿಗಳನ್ನು ಅವರೇ ಆಯ್ಕೆ ಮಾಡಿದ್ದರು. ಅದರಲ್ಲಿ ಹೆಚ್ಚಿನ ಮತಗಳು ಗಿಲ್ಲಿ ಮತ್ತು ಅಶ್ವಿನಿ ಅವರಿಗೆ ಬಿದ್ದಿತ್ತು. ಗಿಲ್ಲಿಗೆ ಹೆಚ್ಚು ಮತ ಬಿದ್ದಿದ್ದರಿಂದ ಅವರೇ ಕ್ಯಾಪ್ಟನ್ ಆಗ್ತಾರೆ ಅಂತ ಎಲ್ಲರೂ ಭಾವಿಸಿದ್ದರು. ಆದರೆ, ಇಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟರು. ಗಿಲ್ಲಿ ಮತ್ತು ಅಶ್ವಿನಿ ಗೌಡಗೆ ಒಂದು ಟಾಸ್ಕ್ ಕೊಟ್ಟರು. ಆ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಇದನ್ನೂ ಓದಿ: Bigg Boss: ಬಿಗ್ ಬಾಸ್ ಮನೆಯಲ್ಲಿ ರಘು ಪತ್ನಿ ಬರ್ತ್‌ಡೇ; ಸರ್ಪ್ರೈಸ್‌ಗೆ ಕಣ್ಣೀರಿಟ್ಟ ರಘು
ಕ್ಯಾಪ್ಟನ್ ಗಿಲ್ಲಿಗೆ ಬಹುಪರಾಕ್…
ಬಿಗ್ ಬಾಸ್ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/LzHPMBpNyc
— Colors Kannada (@ColorsKannada) December 27, 2025
ಬಿಗ್ ಬಾಸ್ ಮನೆ ಕ್ಯಾಪ್ಟನ್ ಆದ ಕೂಡಲೇ ಗಿಲ್ಲಿ ಗೆಟಪ್ಪೇ ಚೇಂಜ್ ಆಗಿದೆ. ಡಿಫರೆಂಟ್ ಹೇರ್‌ಸ್ಟೈಲ್ ಮತ್ತು ಲುಕ್, ಹಣೆಗೆ ತಿಲಕ ಇಟ್ಕೊಂಡು, ಕತ್ತು ಮತ್ತು ಕೈಗೆ ಬೆಳ್ಳಿ ಚೈನ್ ಹಾಕ್ಕೊಂಡು, ಪಂಚೆ ಉಟ್ಕೊಂಡು ಕ್ಯಾಪ್ಟನ್ಸಿ ರೂಮ್‌ಗೆ ಗಿಲ್ಲಿ ಖಡಕ್ ಎಂಟ್ರಿ ಕೊಡ್ತಾರೆ. ಗಿಲ್ಲಿಗೆ ಎಲ್ಲರೂ ಬಹುಪರಾಕ್ ಹೇಳ್ತಾರೆ.
ಗಿಲ್ಲಿ ಕ್ಯಾಪ್ಟನ್ ಆಗಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಗಿಲ್ಲಿ ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸ್ತಾರೆ? ಎಲ್ಲರನ್ನೂ ಹೇಗೆ ಕಂಟ್ರೋಲ್ ಮಾಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಮಾಳು ಮಡದಿ ಎಂಟ್ರಿ – ಅಪ್ಪನಂತೆ ಹೇರ್‌ಕಟ್… ಮಕ್ಕಳೊಂದಿಗೆ ತರ್ಲೆ ಮಾಡಿದ ಗಿಲ್ಲಿ

