ಬಿಗ್‌ಬಾಸ್ ಸೀಸನ್-12ರ (Bigg Boss) ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಟಾಪ್-6 ಸ್ಥಾನದಲ್ಲಿ ಆರು ಜನ ಸ್ಪರ್ಧಿಗಳು ತೀವ್ರ ಪೈಪೋಟಿ ನಡೆಸಿದ್ದಾರೆ. ಈ ವಾರ ವಿಭಿನ್ನವಾದ ಟಾಸ್ಕ್ ಕೊಟ್ಟಿದ್ದಾರೆ ಬಿಗ್‌ಬಾಸ್. ಕೊನೆಯ ಈ ವಾರದಲ್ಲಿ ಮನೆಯ ಮಂದಿಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ಬಿಗ್‌ಬಾಸ್ ಮನೆಗೆ ಬರೋಕೆ ನಡೆದ ಹೋರಾಟಗಳು ಒಂದು ಲೆಕ್ಕವಾದ್ರೆ, ಬೆಂಗಳೂರಿಗೆ ಬಂದಾಗ ಆರಂಭದ ದಿನಗಳನ್ನ ನೆನದು ಅಕ್ಷರಶಃ ಕಣ್ಣೀರಿಟ್ಟಿದ್ದಾರೆ ಸ್ಪರ್ಧಿಗಳು. ಇದರ ಪ್ರೋಮೋ ಬಿಡುಗಡೆಯಾಗಿದೆ. ಪ್ರೋಮೋ ನೋಡಿ ಕರುನಾಡೇ ಕಣ್ಣೀರಿಟ್ಟಿದೆ ಅದಕ್ಕೆ ಕಾರಣ ಗಿಲ್ಲಿ.
ಗಿಲ್ಲಿ ನಟ (Gilli Nata) ಅವರು ತುಂಬಾನೇ ಕಷ್ಟದಿಂದ ಮೇಲಕ್ಕೆ ಬಂದವರು. ಈಗ ಕರ್ನಾಟಕದಾದ್ಯಂತ ಅವರನ್ನು ಆರಾಧಿಸುವವರು ಇದ್ದಾರೆ. ಈ ಮೊದಲು ಅವರು ಅನ್ನ ಕದ್ದು ತಿಂದಿದ್ದರಂತೆ. ಈ ವಿಷಯವನ್ನು ಬಿಗ್‌ಬಾಸ್ ಫಿನಾಲೆ ವಾರದಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ರಕ್ಷಿತಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಆ ಸಂದರ್ಭದ ಪ್ರೋಮೊ ಗಮನ ಸೆಳೆದಿದೆ. ಬಿಗ್‌ಬಾಸ್ ಮನೇಲಿ 100ಕ್ಕೂ ಹೆಚ್ಚು ದಿನಗಳನ್ನ ಕಳೆದಿರುವ ಸ್ಪರ್ಧಿಗಳು ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಕಿತ್ತಾಟದಿಂದ ಕ್ಷಮೆಯತ್ತ – ಒಬ್ಬರಿಗೊಬ್ಬರು Sorry ಕೇಳಿ, ನಗುವಿನ ಅಪ್ಪುಗೆ ನೀಡಿದ ಗಿಲ್ಲಿ, ಅಶ್ವಿನಿ
ನೋವಿನ ದಿನಗಳು, ಕಣ್ಣೀರಿನ ಕತೆಗಳೇ ಸಾಧನೆಗೆ ಸ್ಫೂರ್ತಿ
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/kbddfnsNdm
— Colors Kannada (@ColorsKannada) January 16, 2026
ಬಿಗ್‌ಬಾಸ್ ಮನೆಗೆ ಬಂದ ದಿನದಿಂದ ಈವರೆಗೂ ಎಲ್ಲದಕ್ಕೂ ಕಿತ್ತಾಡುತ್ತ, ಜಗಳವಾಡುತ್ತಿದ್ದ ಸ್ಪರ್ಧಿಗಳು ಪರಸ್ಪರ ಹೊಂದಾಣಿಕೆಯಿಂದ ದಿನ ಕಳೆಯುತ್ತಿದ್ದಾರೆ. ಇಷೂ ದಿನಗಳಲ್ಲಿ ತಮ್ಮಿಂದಾದ ತಪ್ಪುಗಳಿಗೆ ಕ್ಷಮೆಗಳನ್ನ ಕೇಳಿರುವ ಸ್ಪರ್ಧಿಗಳು ಇಂತಹ ಈ ಸುಂದರ ಜರ್ನಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಗಿಲ್ಲಿಯ ಜರ್ನಿ ಹಾಗೂ ಕಾವ್ಯ ಶೈವ ಜರ್ನಿಯನ್ನ ಕಂಡು ಮನೆಯ ಮಂದಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಈಗ ಇಡೀ ಕರುನಾಡ ಮಂದಿಯ ಹೃದಯಕ್ಕೆ ನಾಟಿದೆ.

