ಕನ್ನಡದ ‘ಗಿಲ್ಲಿ’ ಸಿನಿಮಾ (Gilli Film) ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸೌತ್ ಸಿನಿಮಾ ಬಿಟ್ಟು ಬಾಲಿವುಡ್ಗೆ ಹಾರಿದ್ದರು. ಸತತ 7 ಸಿನಿಮಾಗಳ ಸೋಲಿನ ನಂತರ ಈಗ ಮತ್ತೆ ದಕ್ಷಿಣ ಸಿನಿಮಾಗಳತ್ತ ರಾಕುಲ್ ಮುಖ ಮಾಡಿದ್ದಾರೆ. ತಮಿಳಿನ ನಟ ಶಿವಕಾರ್ತಿಕೇಯನ್ಗೆ ‘ಗಿಲ್ಲಿ’ ಬ್ಯೂಟಿ ಹೀರೋಯಿನ್ ಆಗಿದ್ದಾರೆ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯಿರುವಾಗಲೇ ಇಲ್ಲಿನ ಸಿನಿಮಾ ಬೇಡ ಅಂತಾ ಕಡೆಗಣಿಸಿ ಬಾಲಿವುಡ್ ಚಿತ್ರಗಳಿಗೆ ರಾಕುಲ್ ಮಣೆ ಹಾಕಿದ್ದರು. 2014ರಿಂದಲೇ ಹಿಂದಿ ಸಿನಿಮಾರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದರು. ಬಳಿಕ ಅಟ್ಯಾಕ್, ರನ್ವೇ 34, ಕಟ್ಪುತ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ಐ ಲವ್ ಯೂ, ಛತ್ರಿವಾಲಿ ಸಿನಿಮಾಗಳು ಮಕಾಡೆ ಮಲಗಿವೆ. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ
ಬಾಲಿವುಡ್ನ 7 ಸಿನಿಮಾಗಳು ಸೋತ ಮೇಲೆ ಈಗ ಸೌತ್ ಸಿನಿಮಾಗಳಿಗೆ ನಟಿ ಮಣೆ ಹಾಕಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ನಟನೆಯ ‘ಅಲಾಯನ್’ (Ayalaan) ಸಿನಿಮಾಗೆ ರಾಕುಲ್ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ (Indian 2) ಹೀರೋಯಿನ್ ಆಗಿ ಸಾಥ್ ನೀಡಿದ್ದಾರೆ. 7 ಸಿನಿಮಾ ಸೋತ ಮೇಲೆ ಬುದ್ಧಿ ಬಂತಾ ಎಂದು ನೆಟ್ಟಿಗರು ರಾಕುಲ್ ಕಾಲೆಳೆದಿದ್ದಾರೆ.
ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಾಕುಲ್, ಪಾಕೆಟ್ ಮನಿಗಾಗಿ ‘ಗಿಲ್ಲಿ’ ಸಿನಿಮಾ ಮಾಡಿದೆ ಎಂದು ಮಾತನಾಡಿದ್ದರು. ಅಂದು ಅವರ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.