ಬಿಗ್ ಬಾಸ್ ವೀಕ್ಷಕರಿಗೆ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಒಂದಷ್ಟು ಕಿಕ್ ಸಿಗಲಿದೆ. ಮನೆಯಲ್ಲಿ ಸದಾ ಜಗಳವಾಡಿ ಒಬ್ಬರ ಮೇಲೋಬ್ಬರು ಆರೋಪ ಮಾಡ್ಕೊಂಡಿದ್ದ ಗಿಲ್ಲಿ-ಅಶ್ವಿನಿ ಗೌಡ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾದ ‘ಜುಂ ಜುಂ ಮಾಯಾ…’ ಹಾಡಿಗೆ ಗಿಲ್ಲಿ ಮತ್ತು ಅಶ್ವಿನಿ ಗೌಡ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಡ್ಯಾನ್ಸ್‌ಗೆ ಮನೆಮಂದಿ ಥ್ರಿಲ್ ಆಗಿದ್ದಾರೆ. ಸುದೀಪ್ ಕೂಡ ಎಂಜಾಯ್ ಮಾಡಿದ್ದಾರೆ.
ಜುಂಜುಂ ಆಯ… ಅಂತ ಕುಣಿದು ಕುಪ್ಪಳಿಸ್ತಿದಾರೆ ಅಶ್ವಿನಿ-ಗಿಲ್ಲಿ
ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKSP pic.twitter.com/5R1FKiRil4
— Colors Kannada (@ColorsKannada) December 7, 2025
ಡ್ಯಾನ್ಸ್ ಮಾಡುತ್ತಾ ಅಶ್ವಿನಿ ಗೌಡ ಅವರನ್ನು ಗಿಲ್ಲಿ ಮೇಲೆತ್ತಿದ್ದಾರೆ. ಇದನ್ನು ಕಂಡು ಸುದೀಪ್ ನಕ್ಕಿದ್ದಾರೆ. ಈ ಸನ್ನಿವೇಶವನ್ನು ಎಲ್ಲರೂ ಸಖತ್ ಎಂಜಾಯ್ ಮಾಡಿದ್ದಾರೆ.

